ಬೆಂಗಳೂರು: ನಗರದಲ್ಲಿ ರಾತ್ರಿ ಹೊತ್ತು ಕ್ರೈಂ ರೇಟ್ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಹೊಸ “ಇ-ಬೀಟ್” ವಿಧಾನ ‘ಸುಭಾಹು’ ಇ-ಬೀಟ್ ಜಾರಿಗೆ ಬಂದಿದೆ.ಪೇಮೆಂಟ್ ಆ್ಯಪ್‍ಗಳ ರೀತಿ ಇಲ್ಲಿಯೂ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕ್ಯು ಆರ್ ಕೋಡ್ ಸ್ಕ್ಯಾನ್ ಮೂಲಕ ಕುಳಿತಲ್ಲೇ ನೈಟ್ ಬೀಟ್ ಮಾಹಿತಿ ಕಲೆ ಹಾಕಲಾಗುತ್ತೆ. “ಸುಭಾಹು” ಇ-ಬೀಟ್ ಸಿಸ್ಟಮ್ ಗೆ ಕಮೀಷನರ್ ಫಿದಾ ಆಗಿದ್ದು, ರಾತ್ರಿ ಗಸ್ತು ವ್ಯವಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನದ ಟಚ್ ನೀಡಲಾಗಿದೆ. ಅಲ್ಲದೆ ಈ ಸಿಸ್ಟಮ್ ನಿಂದ ಕೆಲ ಪೊಲೀಸ್ ಸಿಬ್ಬಂದಿ ಕಳ್ಳಾಟಕ್ಕೂ ಬ್ರೇಕ್ ಬಿದ್ದಿದೆ. ಬೆಂಗಳೂರು ಉತ್ತರ ವಿಭಾಗದಲ್ಲಿ”ಸುಭಾಹು” ಸಿಸ್ಟಮ್ ಜಾರಿಯಾಗಿದ್ದು, ಕಮಲ್ ಪಂತ್ ರಿಂದ “ಸುಭಾಹು” ಇ-ಬೀಟ್ ವ್ಯವಸ್ಥೆಗೆ ಶ್ಲಾಘನೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ ನೆರವುಏನಿದು “ಸುಭಾಹು ಇ-ಬೀಟ್” ಸಿಸ್ಟಮ್?
ರಾತ್ರಿ ಗಸ್ತನ್ನು ತಂತ್ರಜ್ಞಾನದ ಮೂಲಕ ಆಪರೇಟ್ ಮಾಡುವ ವಿಧಾನವೇ ಸುಭಾಹು ಇ – ಬೀಟ್ ಸಿಸ್ಟಮ್. ರಾತ್ರಿ ಪಾಳಯದ ಸಿಬ್ಬಂದಿ ಕಡ್ಡಾಯವಾಗಿ ಈ ಆ್ಯಪ್ ನಲ್ಲಿ ಲಾಗ್ ಇನ್ ಆಗಲೇಬೇಕು. ಅಲಾಟ್ ಅಗಿರುವ ಪಾಯಿಂಟ್ ಗಳಿಗೆ ವಿಸಿಟ್ ಮಾಡಲೇಬೇಕು. ನಿಯೋಜಿತ ಸ್ಪಾಟ್ ಗೆ ಹೋಗಿ, ಆ ಲೊಕೇಶನ್ ಪಾಯಿಂಟ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಪ್ರೂವಲ್ ಪಡೀಬೇಕು. ನಿಯೋಜಿತ ಸ್ಪಾಟ್ ಗೆ ಅಲ್ಲಿನ ಬೀಟ್ ಪಾಯಿಂಟ್ ನಲ್ಲಿ ಸ್ಕ್ಯಾನ್ ಮಾಡಬೇಕು. ಸ್ಕ್ಯಾನ್ ನಂತ್ರ ಅಪ್ರೂವಲ್ ಪಡೆದು ಬೀಟ್ ಗಸ್ತು ಮಾಡಬೇಕು. ಬೀಟ್ ಬಳಿ ಹೋದಾಗ ಪೊಲೀಸರು ಇದ್ದಾರ ಇಲ್ವಾ ಅನ್ನೋದನ್ನ ಸಹ ಪತ್ತೆ ಹಚ್ಚಬಹುದಾಗಿದೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್






 Advertisement 




Sign in to your account
Username or Email Address


Password

 Remember Me


