ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಅಬ್ಬರ ಇಳಿಮುಖವಾಗಿದ್ದು, ಇಂದು 1,065 ಹೊಸ ಪ್ರಕರಣಗಳು ವರದಿಯಾಗಿವೆ. 1,486 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಸದ್ಯ 22,048 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾಗೆ 28 ಜನ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 37,007ಕ್ಕೆ ಏರಿಕೆಯಾಗಿದೆ. ಇದುವರೆಗೂ ಒಟ್ಟು 29,30,529 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ.0.93 ಮತ್ತು ಮೃತಪಟ್ಟವರ ಪ್ರಮಾಣ ಶೇ.2.62ರಷ್ಟಿದೆ. 1,13,580 ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.ರಾಜಧಾನಿಯಲ್ಲಿ ಕೊರೊನಾ ಇಳಿಕೆಯಾಗಿದ್ದು, ಇಂದು 270 ಜನಕ್ಕೆ ಸೋಂಕು ತಗುಲಿದೆ. ಇಂದು ನಾಲ್ವರನ್ನು ಮಹಾಮಾರಿ ಬಲಿಪಡೆದುಕೊಂಡಿದ್ದು, 8,054 ಸಕ್ರಿಯ ಪ್ರಕರಣಗಳಿವೆ. ದಕ್ಷಿಣ ಕನ್ನಡದಲ್ಲಿಂದು ಬೆಂಗಳೂರು ನಗರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಗದಗ, ರಾಯಚೂರು, ಕೊಪ್ಪಳದಲ್ಲಿಂದು ಯಾವುದೇ ಕೊರೊನಾ ಪ್ರಕರಣಗಳಯ ದಾಖಲಾಗಿಲ್ಲ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 3, ಬೆಳಗಾವಿ 11, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 270, ಬೀದರ್ 2, ಚಾಮರಾಜನಗರ 11, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 22, ಚಿತ್ರದುರ್ಗ 11, ದಕ್ಷಿಣ ಕನ್ನಡ 384, ದಾವಣಗೆರೆ 5, ಧಾರವಾಡ 7, ಗದಗ 0, ಹಾಸನ 54, ಹಾವೇರಿ 1, ಕಲಬುರಗಿ 6, ಕೊಡಗು 34, ಕೋಲಾರ 21, ಕೊಪ್ಪಳ 0, ಮಂಡ್ಯ 18, ಮೈಸೂರು 63, ರಾಯಚೂರು 0, ರಾಮನಗರ 4, ಶಿವಮೊಗ್ಗ 45, ತುಮಕೂರು 31, ಉಡುಪಿ 107, ಉತ್ತರ ಕನ್ನಡ 38, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಬೆಂಗಳೂರಿಗೆ ಗಡಿ ವಾರ್ಡ್ ಗಳೇ ಡೇಂಜರ್ ಝೋನ್ – 172ಕ್ಕೇರಿದ ಆಕ್ಟಿವ್ ಕಂಟೈನ್‍ಮೆಂಟ್ ಝೋನ್Sign in to your account
Username or Email Address


Password

 Remember Me


