ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಬಿಎಂಟಿಸಿ ವತಿಯಿಂದ ಪರೀಕ್ಷೆ ದಿನ ಉಚಿತ ಓಡಾಟಕ್ಕೆ ಅವಕಾಶ ಮಾಡಿದೆ.ಪೂರಕ ಪರೀಕ್ಷೆ ದಿನಾಂಕ 19-08-2021 ರಿಂದ 03-09-2021ರವರೆಗೆ ನಿಗದಿಯಾಗಿದ್ದು. ಈ ಪರೀಕ್ಷೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪತ್ರ ತೋರಿಸುವ ಮೂಲಕ ಬಿಎಂಟಿಸಿ ಬಸ್ ನಲ್ಲಿ ಉಚಿತವಾಗಿ ತೆರಳೋದಕ್ಕೆ ಅವಕಾಶ ಮಾಡಿ ಕೊಡಲಾಗಿದೆ.ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬಿಎಂಟಿಸಿಯು ವಿದ್ಯಾರ್ಥಿ ಸಮುದಾಯ ಹಿತವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಾಸಸ್ಥಳದಿಂದ ಕಾಲೇಜಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿ ವಿತರಣೆ ಮಾಡುತ್ತಿದೆ. ಇದನ್ನೂ ಓದಿ: ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆSign in to your account
Username or Email Address


Password

 Remember Me


