ಹುಬ್ಬಳ್ಳಿ: ಮಾರಾಟಕ್ಕಿಟ್ಟ ಕೊತ್ತಂಬರಿ ಸರಿಯಿಲ್ಲವೆಂದು ಕೊತ್ತಂಬರಿ ಖರೀದಿಸದ ಗ್ರಾಹಕನಿಗೆ ವ್ಯಾಪಾರಸ್ಥ ಹಾಗೂ ಆತನ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹುಬ್ಬಳ್ಳಿಯ ಗೌಳಿಗಲ್ಲಿಯಲ್ಲಿ ಹಳೇ ಹುಬ್ಬಳ್ಳಿಯ ನಿವಾಸಿ ಮಹಮ್ಮದಗೌಸ್ ಬಿಜಾಪುರ ಮೇಲೆ ಕೊತ್ತಂಬರಿ ವ್ಯಾಪಾರ ಮಾಡುತ್ತಿದ್ದ ಖಾದರ್ ಹಾಗೂ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ್ದಾರೆ.ಮಹಮ್ಮದಗೌಸ್ ಪ್ರತಿನಿತ್ಯ ಖಾದರ್ ಬಳಿಯೇ ಕೊತ್ತಂಬರಿ ಖರೀದಿ ಮಾಡುತ್ತಿದ್ದರು. ಆದರೆ ನಿನ್ನೆ ಕೊತ್ತಂಬರಿ ಸರಿಯಿಲ್ಲವೆಂದು ಕೊತ್ತಂಬರಿ ಸೊಪ್ಪು ಖರೀದಿ ಮಾಡಲು ನಿರಾಕರಿಸಿದ್ದಕ್ಕೆ ಕೋಪಿತಗೊಂಡ ಖಾದರ್ ಚಾಕು ಇರಿದಿದ್ದಾನೆ. ಸದ್ಯ ಗಾಯಾಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ






 Advertisement 




Sign in to your account
Username or Email Address


Password

 Remember Me


