ಬೆಂಗಳೂರು/ನೆಲಮಂಗಲ: ಅವರೆಲ್ಲ ಊಟ ಮುಗಿಸಿ ಗಾಡ ನಿದ್ರೆಗೆ ಜಾರಿದ್ರು, ಈ ವೇಳೆ ಏಕಾಏಕಿ ಮಾರಕಾಸ್ತ್ರಗಳ ಜೊತೆಗೆ ಒಂಟಿ ಮನೆಗೆ ನುಗ್ಗಿದ ಐವರು ಮುಸುಕು ದಾರಿಗಳು ದರೋಡೆ ಮಾಡಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ನಗರೂರು ಗ್ರಾಮದಲ್ಲಿ ನಡೆದಿದೆ.ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ನಗರೂರು ಗ್ರಾಮದ ಈಶ್ವರಪ್ಪ ಎಂಬವರ ಮನೆಗೆ ನುಗ್ಗಿದ ಐವರು ದರೋಡೆಕಾರರು, ಮನೆಯವರಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಯುವಕನನ್ನು ಮದುವೆಯಾಗಲು ಆಂಟಿ ಪ್ಲ್ಯಾನ್- ಪೊಲೀಸ್ ಮೊರೆ ಹೋದ ಯುವಕಮನೆಗೆ ನುಗ್ಗಿದ ವೇಳೆ ಮನೆಯಲ್ಲಿದ್ದವರಿಗೆ ಜೋರಾಗಿ ಚೀರಾಡದಂತೆ ಬೆದರಿಸಿ, ಬಾಯಿ ಕಟ್ಟಿ 30 ಗ್ರಾಂ ಚಿನ್ನ ಹಾಗೂ ಒಂದು ಲಕ್ಷ ರೂಪಾಯಿ ಹಣ ದರೋಡೆ ಮಾಡಿದ್ದಾರೆ. ಐವರು ಮುಸುಕುದಾರಿಗಳಿಂದ ಕೃತ್ಯ ನಡೆದಿದೆ ಎನ್ನಲಾಗಿದ್ದು, ತಕ್ಷಣವೇ ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


