ರಾಯಚೂರು: ದೇವದುರ್ಗ ಶಾಸಕ ಶಿವನಗೌಡ ನಾಯಕ್‍ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಧಾನಗೊಂಡಿಲ್ಲ. ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರೂ, ಸಿಗದಿದ್ದಕ್ಕೆ ಅವರಿಗೆ ನೋವಿದೆ. ನಾನು ಅವರ ಜೊತೆ ಮಾತನಾಡಿದ್ದೇನೆ, ನಿನ್ನೆ ನನ್ನ ಜೊತೆಯೇ ಇದ್ದರು ಅಂತ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೇ ಜಿಲ್ಲೆಯ ಉಸ್ತುವಾರಿ ಸಚಿವ ಆಗಿದ್ದೇನೆ, ಯಾವುದೇ ಸಮಸ್ಯೆಯಿಲ್ಲ. ಶಿವನಗೌಡ ಸೋಮಣ್ಣ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಎಲ್ಲಾ ನಾಯಕರ ಜೊತೆ ಶಿವನಗೌಡ ನಾಯಕ್ ಹೊಂದಾಣಿಕೆಯಿಂದ ಹೋಗುತ್ತಾರೆ. ಇನ್ನೂ ನಾಲ್ಕು ಸಚಿವ ಖಾತೆ ಖಾಲಿಯಿವೆ ಯಾರ್ಯಾರಿಗೆ ಸಿಗಲಿದೆ ನೋಡೋಣ. ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರ ಎಂದರು.ಹುಕ್ಕಾ ಬಾರ್ ಹಾಗೂ ವಾಜಪೇಯಿ ಕುರಿತ ಹೇಳಿಕೆಗಳ ಕುರಿತು ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಒಂದೇ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ. ಪ್ರಿಯಾಂಕ ಖರ್ಗೆ, ಸಿ.ಟಿ.ರವಿ ಸೇರಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.  ಇದನ್ನೂ ಓದಿ:ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: ಶ್ರೀರಾಮುಲು






 Advertisement 




Sign in to your account
Username or Email Address


Password

 Remember Me


