ಚಿಕ್ಕೋಡಿ: ಆಕಸ್ಮಿಕ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಬೆಂಕಿ ತಗುಲಿ ಮನೆ ಹೊತ್ತಿ ಉರಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರಭುವಾಡಿಯಲ್ಲಿ ನಡೆದಿದೆ.ದಿಲೀಪ್ ಶಂಕರ್ ಕದಂ ಎಂಬವರ ಮನೆಯಲ್ಲಿದ್ದ ಗ್ಯಾಸ್ ಲೀಕ್ ಆಗಿ ಏಕಾಏಕಿ ಬೆಂಕಿ ತಗುಲಿದೆ. ಈ ಪರಿಣಾಮ ಮನೆಗೆ ಬೆಂಕಿ ಹತ್ತಿ ಮನೆಯಲ್ಲಿದ್ದ ವಸ್ತುಗಳು ನಾಶವಾಗಿವೆ. ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಧಗಧಗನೆ ಮನೆ ಹೊತ್ತಿ ಉರಿದಿದೆ. ಆಕಸ್ಮಿಕವಾಗಿ ಗ್ಯಾಸ್ ಲೀಕ್ ಆಗಿದ್ದರಿಂದ ಘಟನೆ ಸಂಭವಿಸಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಮನೆಯ ಸದಸ್ಯರು ಪಾರಾಗಿದ್ದಾರೆ.ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಘಟನೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ:ಸಿಲಿಂಡರ್ ಹೊತ್ತ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡು ಹೊತ್ತಿ ಉರಿಯಿತು






 Advertisement 




Sign in to your account
Username or Email Address


Password

 Remember Me


