ಹಾವೇರಿ: ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದ ಬಳಿ ನಡೆದಿದೆ.ಕಮಲಮ್ಮ ಕಾಸಂಬಿ (55) ಮೃತರಾಗಿದ್ದಾರೆ. ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ:  ಮೇಕೆದಾಟು ಮಾಡೇ ಮಾಡುತ್ತೇವೆ, ನಾಡಿನ ರಕ್ಷಣೆ ನಮ್ಮ ಹೊಣೆ: ಜಿಎಂ ಸಿದ್ದೇಶ್ವರ್ಮಗನೊಂದಿಗೆ ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಎದುರಿಗೆ ಸಾರಿಗೆ ಬಸ್ ಬಂದಿದ್ದು, ಬಸ್ ನಿಂದ ತಪ್ಪಿಸಿಕೊಳ್ಳಲು ಹೋದ ವೇಳೆ ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಮಲಮ್ಮಳ ತಲೆಯ ಮೇಲೆ ಬಸ್ ಹರಿದು ಹೋಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಕಮಲಮ್ಮಳ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಈ ಘಟನೆ ನಡೆದಿದೆ.






 Advertisement 




Sign in to your account
Username or Email Address


Password

 Remember Me


