ತುಮಕೂರು: ಜಿಲ್ಲೆಗೆ 550 ಕೋಟಿ ಅನುದಾನದ ವಿಚಾರದಲ್ಲಿ ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರಿಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವಾಜ್ ಹಾಕಿರುವ ಪ್ರಸಂಗ ನಡೆದಿದೆ.ಗುಬ್ಬಿ ತಾಲೂಕಿನ ಚೇಳೂರು ಸಮೀಪದ ಸಿ. ನಂದಿಹಳ್ಳಿ ಗ್ರಾಮದಲ್ಲಿ ನಡೆದ ಬೆಸ್ಕಾಂ ವಿದ್ಯುತ್ ಎಂಎಸ್‍ಎಸ್ ಸ್ಟೇಷನ್ ಉದ್ಘಾಟನೆಯ ವೇಳೆ ಇಬ್ಬರು ನಾಯಕರು ಕೈಕೈ ಮಿಲಾಯಿಸಿಕೊಂಡು ಜಗಳಕ್ಕಿಳಿದ್ದಾರೆ. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದೆ ಎಂದು ಸಭೆಯಲ್ಲಿ ಜಿಎಸ್ ಬಸವರಾಜು ಹೇಳಿದರು. ಈ ವೇಳೆ ರೊಚ್ಚಿಗೆದ್ದ ಗುಬ್ಬಿ ಶ್ರೀನಿವಾಸ್, ರೈತರಿಗೆ ಸುಳ್ಳು ಹೇಳ್ತಿಯಾ, ನಿಮ್ ಯೋಗ್ಯತೆಗೆ ಇಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತೀಯಾ..? ವಯಸ್ಸಾಗಿದೆ ಈಗಲಾದ್ರೂ ಸುಳ್ಳು ಹೇಳೋದನ್ನ ನಿಲ್ಲಿಸು ಎಂದು ಏಕವಚನದಲ್ಲಿಯೇ ಮಾತಿಗಿಳಿದರು.ಇಲ್ಲದ ವಿಚಾರವನ್ನು ಮಾತಾಡಬೇಡ ನೀನು. ನೀನು ಅಯೋಗ್ಯ ನನ್ಮಗ ಎಂದು ಇಬ್ಬರೂ ನಾಯಕರು ಪರಸ್ಪರ ಬೈದಾಡಿಕೊಂಡರು. 550 ಕೋಟಿ ತಂದಿದ್ದೀವಿ ಎಂದ ಬಸವರಾಜುಗೆ 550 ಕೋಟಿ ನಿಮ್ ತಾತ ತಂದಿದ್ನಾ..? 550 ಕೋಟಿ ಎಲ್ ತಂದಿದ್ದೀರಿ ತೋರಿಸ್ರಿ ಎಂದು ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.Sign in to your account
Username or Email Address


Password

 Remember Me


