ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ರೋಚಕ ಕಹಾನಿ ಕೆದಕಿದಷ್ಟು ಬಯಲಿಗೆ ಬರುತ್ತಿದೆ.ಆಗಸ್ಟ್ 12 ರಾತ್ರಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ 2 ಕಾರ್‍ಗೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ ಒಂದೆಡೆ ಖಾಕಿ ಆರೋಪಿಗಳ ಹುಡುಕಾಟದಲ್ಲಿ ನಿರತವಾಗಿದ್ದರೆ, ಇತ್ತ ಪಕ್ಕದ ರೋಡಲ್ಲೇ ಆರೋಪಿಗಳ ರೌಂಡ್ಸ್ ಹೊಡೆಯುತ್ತಿದ್ದಾರೆ. ಮಧ್ಯರಾತ್ರಿ ಸುಮಾರು 1:30ಕ್ಕೆ ಬೆಂಕಿ ಹಚ್ಚಿ, 2:30ಕ್ಕೆ ಪಕ್ಕದ ರಸ್ತೆಯಲ್ಲೇ ಇದ್ದರಂತೆ. ಮನೆ ಮುಂದಿರೋ ಬೈಕ್‍ಗಳ ಕಳ್ಳತನಕ್ಕೆ ಆರೋಪಿಗಳು ಸರ್ಕಸ್ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಹೊಟ್ಟೆಗೆ ಊಟವಿಲ್ಲದೆ ಗಂಟೆಗಟ್ಲೆ ಶಾಸಕರ ಮನೆ ಬಳಿ ಕಾದ್ವಿ – ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಟ್ವಿಸ್ಟ್ಆ 1 ಗಂಟೆಯಲ್ಲಿ 50ಕ್ಕೂ ಹೆಚ್ಚು ಬೈಕ್ ಕದಿಯಲು ಯತ್ನ ಮಾಡಿದ್ದರು. ಕೊನೆಗೆ 2:32ಕ್ಕೆ ಪ್ಲಾಟಿನಾ ಬೈಕ್ ಕದ್ದು ಆರೋಪಿಗಳು ಕಾಲ್ಕಿತ್ತಿದ್ದಾರೆ. ಆರೋಪಿಗಳ ಬೈಕ್ ಕಳ್ಳತನದ ಫುಲ್‍ಸೀನ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಒಂದಲ್ಲ, ಎರಡಲ್ಲ 80 ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನಗಳು ಸೆರೆಯಾಗಿದೆ. ಇದುವರೆಗೆ 50ಕ್ಕೂ ಹೆಚ್ಚು ಸಿಸಿಕ್ಯಾಮೆರಾಗಳ ಪರಿಶೀಲನೆ ಮಾಡಲಾಗಿದೆ.Sign in to your account
Username or Email Address


Password

 Remember Me


