ಬೆಂಗಳೂರು: ರಾಜ್ಯದಲ್ಲಿಂದು 1,669 ಹೊಸ ಕೊರೊನಾ ಪ್ರಕರಣ ವರದಿಯಾಗಿದ್ದು, 22 ಜನ ಸಾವನ್ನಪ್ಪಿದ್ದಾರೆ. ಇಂದು 1,672 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ 22,703 ಸಕ್ರಿಯ ಪ್ರಕರಣಗಳಿವೆ.ಕೋವಿಡ್-19 ಸೋಂಕಿನ ಖಚಿತ ಶೇಕಡಾವಾರು ಪ್ರಮಾಣ ಶೇ.0.98 ಮತ್ತು ಮರಣ ಪ್ರಮಾಣ ಶೇ.1.31ರಷ್ಟಿದೆ. ರಾಜ್ಯದಲ್ಲಿ ಇದುವರೆಗೂ 29,26,401 ಕೊರೊನಾ ಪ್ರಕರಣಗಳು ದಾಖಲಾಗಿದದ್ದು, ಸಾವನ್ನಪ್ಪಿದವರ ಸಂಖ್ಯೆ 36,933ಕ್ಕೇರಿಕೆಯಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,69,332 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಕೊಂಚ ಏರಿಕೆಯಾಗಿದ್ದು, ಇಂದು 425 ಜನಕ್ಕೆ ಸೋಂಕು ತಗುಲಿದ್ರೆ ಐವರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿಯೇ 8,189 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಂತರ ದಕ್ಷಿಣ ಕನ್ನಡದಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗಿವೆ. ಇವತ್ತು ಬೀದರ್, ಹಾವೇರಿ ಮತ್ತು ರಾಮನಗರದಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 2, ಬಳ್ಳಾರಿ 2, ಬೆಳಗಾವಿ 49, ಬೆಂಗಳೂರು ಗ್ರಾಮಾಂತರ 14, ಬೆಂಗಳೂರು ನಗರ 425, ಬೀದರ್ 0, ಚಾಮರಾಜನಗರ 22, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 51, ಚಿತ್ರದುರ್ಗ 16, ದಕ್ಷಿಣ ಕನ್ನಡ 390, ದಾವಣಗೆರೆ 18, ಧಾರವಾಡ 8, ಗದಗ 3, ಹಾಸನ 113, ಹಾವೇರಿ 0, ಕಲಬುರಗಿ 3, ಕೊಡಗು 73, ಕೋಲಾರ 27, ಕೊಪ್ಪಳ 2, ಮಂಡ್ಯ 35, ಮೈಸೂರು 106, ರಾಯಚೂರು 2, ರಾಮನಗರ 0, ಶಿವಮೊಗ್ಗ 56, ತುಮಕೂರು 69, ಉಡುಪಿ 115, ಉತ್ತರ ಕನ್ನಡ 62, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.Sign in to your account
Username or Email Address


Password

 Remember Me


