ಚಾಮರಾಜನಗರ: ಎರಡು ಹುಲಿಗಳ ನಡುವೆ ನಡೆದ ಕಾದಾಟದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ನಡೆದಿದೆ.ಸರಹದ್ದಿನ ಕದನದಲ್ಲಿ ಹುಲಿಯೊಂದು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಎಲಚೆಟ್ಟಿ ಗಸ್ತಿನ ಆಲದಮರದ ಹಳ್ಳದಲ್ಲಿ ನಡೆದಿದೆ. ಅಂದಾಜು 4 ರಿಂದ 5 ವರ್ಷದ ಗಂಡು ಹುಲಿ ಮೃತಪಟ್ಟಿದ್ದು, ಹುಲಿಗಳ ನಡುವಿನ ಸರಹದ್ದಿನ ಕಾದಾಟದಲ್ಲಿ ಸತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಮೃತ ಹುಲಿ ಮೈಮೇಲೆ ತೀವ್ರತರ ಗಾಯಗಳಾಗಿದ್ದು, ಉಗುರು, ಹಲ್ಲುಗಳು, ಅಂಗಾಂಗಗಳು ಸುರಕ್ಷಿತವಾಗಿವೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎನ್‍ಟಿಸಿಎ ಪ್ರತಿನಿಧಿ, ಪಶು ವೈದ್ಯರ ಸಮ್ಮುಖದಲ್ಲಿ ಹುಲಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸುಡಲಾಗಿದೆ.Sign in to your account
Username or Email Address


Password

 Remember Me


