ಬೆಂಗಳೂರು: ಹಲೋ ಎಲ್ಲಿದ್ದೀಯಾ? ನಿನ್ನ ಮೇಲೆ ಡೌಟ್ ಇಲ್ಲ, ಬಾ ಮನೆಗೆ ಮಾತಾಡೋಣ ಎಂದು ಶಿಷ್ಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ.ಇಡಿ ದಾಳಿ ನಂತರ ಮುನಿಸಿಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅಂತರ ಕಾಯ್ದುಕೊಂಡಿದ್ದಾರೆ. ಇಂದು ಸಿದ್ದರಾಮಯ್ಯರಿಗೆ ಕರೆ ಮಾಡಿ ಜನ್ಮ ದಿನದ ಶುಭ ಕೋರಿದ್ದಾರೆ. ಸಿದ್ದರಾಮಯ್ಯನವರು ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಜಮೀರ್ ಅಹಮ್ಮದ್ ಕರೆ ಮಾಡಿದ್ದರಿಂದ ಮಾಧ್ಯಮಗಳ ಮುಂದೆ ಶಾಸಕರ ಜೊತೆ ಮಾಜಿ ಸಿಎಂ ಮಾತುಕತೆ ನಡೆಸಿದರು.ಹಲೋ ಎಲ್ಲಿದ್ದೀಯಾ?
ಹಲೋ ಎಲ್ಲಿದ್ದೀಯಾ ನೀನು ಎಂದು ಕೇಳಿದಾಗ ತಾವು ಹೈದರಾಬಾದ್ ನಲ್ಲಿರೋದಾಗಿ ತಿಳಿಸಿದರು. ನಿಮ್ಮ ಮೇಲೆ ಯಾಕೆ ಅನುಮಾನ ಮಾಡಲಿ. ನನ್ನ ಜೀವನದಲ್ಲಿ ಅದೆಲ್ಲ ಇಲ್ಲ. ಮಾಧ್ಯಮದವರೇ ಏನೇನೋ ಹುಟ್ಟುಹಾಕ್ತಾರೆ. ನಾಳೆ ಮನೆಗೆ ಬಾ ಮಾತಾಡೋಣ ಎಂದು ಆಹ್ವಾನ ನೀಡಿದರು.ಈ ಕರೆ ಸಿದ್ದರಾಮಯ್ಯ ಆಪ್ತ ವಲಯದ ಪಕ್ಕಾ ಪ್ಲಾನ್ಡ್ ಫೋನ್ ಕಾಲ್ ನಂತಿತ್ತು. ಬೆಳಗ್ಗೆಯಿಂದ 10 ಬಾರಿ ಕರೆ ಮಾಡಿದ್ರೂ ಮಾತಾಡೋಕೆ ಆಗಿಲ್ಲ, ಮಾತಾಡಿ ಎಂದು ಶಾಸಕ ಬೈರತಿ ಸುರೇಶ್ ಸುದ್ದಿಗೋಷ್ಠಿ ಮಧ್ಯೆಯೇ ಸಿದ್ದರಾಮಯ್ಯಗೆ ಫೋನ್ ನೀಡಿದರು. ಇದನ್ನೂ ಓದಿ: ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ.ರವಿ ಸಂಸ್ಕೃತಿ: ರಾಮಲಿಂಗಾರೆಡ್ಡಿ ಕಿಡಿSign in to your account
Username or Email Address


Password

 Remember Me


