ಬೆಂಗಳೂರು: ಇಂದು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.ದೇಶಭಕ್ತ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ಸಿಗರಿಗೆ ನಾನು ಇಂದಿರಾಗಾಂಧಿ ಅವರ ಕುರಿತು ಸತ್ಯ ಹೇಳಿದ್ದಕ್ಕೆ ಭಾರೀ ಕೋಪ ಬಂದಿದೆ. ಒಂದು ಕುಟುಂಬದ ಓಲೈಕೆಯೇ ನಿಮ್ಮ ಸಂಸ್ಕೃತಿಯೇ? ಇಂದಿರಾ ಕ್ಯಾಂಟೀನ್ ಬದಲು ನಾಡಿನ ಅನ್ನದ ದೇವತೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಯಾಕಾಗಬಾರದು? ಇಲ್ಲಿನ ಮಣ್ಣಿನ ಮಗನ ಹೆಸರಿಡಬಹುದಿತ್ತಲ್ಲವೇ? ರಾಷ್ಟ್ರವಾದಿ ವೀರ್ ಸವರ್ಕರ್ ಅವರನ್ನು ನಿಂದಿಸುವ ಕಾಂಗ್ರೆಸ್ಸಿಗರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸರ್ವಾಧಿಕಾರಿಯನ್ನು ನಾಡಿನ ಅಧಿ ದೇವತೆಯಂತೆ ಪೂಜಿಸುತ್ತಿದ್ದಾರೆ. ಇಂದಿರಾ ಗಾಂಧಿಯವರು ನಿಜವಾಗಲೂ ಗರೀಬಿ ಹಟಾವೋ ಮಾಡಿದ್ದಿದ್ದರೆ “ಇಂದಿರಾ ಕ್ಯಾಂಟೀನ್” ಸ್ಥಾಪಿಸುವ ಅವಶ್ಯಕತೆ ಏನಿತ್ತು?ದೇಶಭಕ್ತ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ಸಿಗರಿಗೆ ನಾನು ಇಂದಿರಾಗಾಂಧಿ ಅವರ ಕುರಿತು ಸತ್ಯ ಹೇಳಿದ್ದಕ್ಕೆ ಭಾರೀ ಕೋಪ ಬಂದಿದೆ.ಒಂದು ಕುಟುಂಬದ ಓಲೈಕೆಯೇ ನಿಮ್ಮ ಸಂಸ್ಕೃತಿಯೇ?ಇಂದಿರಾ ಕ್ಯಾಂಟೀನ್ ಬದಲು ನಾಡಿನ ಅನ್ನದ ದೇವತೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಯಾಕಾಗಬಾರದು?ಇಲ್ಲಿನ ಮಣ್ಣಿನ ಮಗನ ಹೆಸರಿಡಬಹುದಿತ್ತಲ್ಲವೇ?1/3— C T Ravi ???????? ಸಿ ಟಿ ರವಿ (@CTRavi_BJP) August 12, 2021ಕಾಂಗ್ರೆಸ್ಸಿಗರು ಉತ್ತರಿಸುವರೇ? ತಮಗೆ ತಾವೇ ಭಾರತ ರತ್ನ ಕರುಣಿಸಿಕೊಂಡ ನೆಹರು ಮತ್ತು ಇಂದಿರಾ ಗಾಂಧಿ, ಡಾ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಬದಲಾಗಿ ಅವರು ಬದುಕಿರುವವರೆಗೂ ಅವರನ್ನು ವಿರೋಧಿಸಿದರು. ಸಂವಿಧಾನ ಶಿಲ್ಪಿಯನ್ನು ವಿರೋಧಿಸಿದ ಕಾಂಗ್ರೆಸ್ ಸಂಸ್ಕೃತಿ ಜಗತ್ತಿಗೇ ತಿಳಿದಿದೆ. ಕಾಂಗ್ರೆಸ್ಸಿಗರು ಅಪಾತ್ರರ ಪೂಜೆ ಮಾಡಿಕೊಂಡಿರಲಿ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ : ಸಿಟಿ ರವಿತಮಗೆ ತಾವೇ ಭಾರತ ರತ್ನ ಕರುಣಿಸಿಕೊಂಡ ನೆಹರು ಮತ್ತು ಇಂದಿರಾ ಗಾಂಧಿ, ಡಾ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಬದಲಾಗಿ ಅವರು ಬದುಕಿರುವವರೆಗೂ ಅವರನ್ನು ವಿರೋಧಿಸಿದರು.ಸಂವಿಧಾನ ಶಿಲ್ಪಿಯನ್ನು ವಿರೋಧಿಸಿದ ಕಾಂಗ್ರೆಸ್ ಸಂಸ್ಕೃತಿ ಜಗತ್ತಿಗೇ ತಿಳಿದಿದೆ.ಕಾಂಗ್ರೆಸ್ಸಿಗರು ಅಪಾತ್ರರ ಪೂಜೆ ಮಾಡಿಕೊಂಡಿರಲಿ ನಮ್ಮ ಅಭ್ಯಂತರವಿಲ್ಲ3/3— C T Ravi ???????? ಸಿ ಟಿ ರವಿ (@CTRavi_BJP) August 12, 2021ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?: 
ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್‍ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ಬಾರ್ ತೆರೆಯಲಿ, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ತೆರೆಯಲಿ. ಈಗ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಬೇಕು ಅಂತಾ ಪ್ರಸ್ತಾಪಿಸಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ.ರವಿ ಸಂಸ್ಕೃತಿ: ರಾಮಲಿಂಗಾರೆಡ್ಡಿ ಕಿಡಿ Sign in to your account
Username or Email Address


Password

 Remember Me


