ಶಿವಮೊಗ್ಗ: ಎಲ್ಲಾ ಸರಿ ಇದ್ದರೂ ಪರೀಕ್ಷೆ ಎಂಬ ಭಯ ಆವರಿಸಿದರೆ ಉತ್ತಮ ಅಂಕ ಪಡೆಯುವುದೇ ಕಷ್ಟ. ಹೀಗಿರುವಾಗ ಕಿಡ್ನಿ ವೈಫಲ್ಯದ ನಡುವೆಯೂ ವಿದ್ಯಾರ್ಥಿನಿಯೊಬ್ಬಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ ಕೆ.ಎಸ್. ಮೂತ್ರಪಿಂಡ ನೋವಿನ ನಡುವೆಯೂ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.93.12 ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.ಆವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುವರಿ ಗ್ರಾಮದ ಶ್ರೀಧರ್ ಹಾಗೂ ಶೈಲಜಾ ದಂಪತಿಯ ಪುತ್ರಿ ಶ್ರೀನಿಧಿಗೆ ಕಳೆದ ನಾಲ್ಕು ವರ್ಷದ ಹಿಂದೆ ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಂಡಿದ್ದು, ವಾರದಲ್ಲಿ ಮೂರು ಬಾರಿ ಡಯಾಲಿಸಿಸ್‍ಗೆ ಒಳಗಾಗಬೇಕಿದೆ. ಆದರೂ ಸದಾ ಓದಿನಲ್ಲಿ ಮುಂದಿರುವ ಈ ವಿದ್ಯಾರ್ಥಿನಿ ಮೂತ್ರಪಿಂಡ ಸಮಸ್ಯೆಯ ನೋವಿಗೆ ಭಯ ಬೀಳದೇ ತನ್ನ ವ್ಯಾಸಂಗ ಮುಂದುವರಿಸಿದ್ದಾಳೆ.ಎಸ್‍ಎಸ್‍ಎಲ್‍ಸಿ ಪರೀಕ್ಷೆ ದಿನ ಸಹ ಡಯಾಲಿಸಿಸ್‍ಗೆ ಒಳಗಾಗಿದ್ದ ಈ ವಿದ್ಯಾರ್ಥಿನಿ, ಮೂತ್ರಪಿಂಡ ವೈಫಲ್ಯದ ನೋವಿನ ನಡುವೆಯೂ ಪರೀಕ್ಷೆಗೆ ಹಾಜರಾಗಿ ಅತೀ ಹೆಚ್ಚು ಅಂಕ ಪಡೆದಿದ್ದಾಳೆ. ತೀವ್ರ ಅನಾರೋಗ್ಯದ ನಡುವೆಯೂ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿನಿಯನ್ನು ಶಿಕ್ಷಕರು ಅಭಿನಂದಿಸಿದ್ದಾರೆ. ಇದನ್ನೂ ಓದಿ:ಹಾಕಿ ಕೋಚ್‌ ಅಂಕಿತಾ ಸುರೇಶ್‌ಗೆ ಕೊಡಗಿನಲ್ಲಿ ಅದ್ಧೂರಿ ಸ್ವಾಗತ






 Advertisement 




Sign in to your account
Username or Email Address


Password

 Remember Me


