ಚಿತ್ರದುರ್ಗ: ಕಳ್ಳರು ಕದ್ದ ಚಿನ್ನವನ್ನು ಖರೀದಿಸಿರುವ ಆರೋಪದ ಮೇಲೆ ಬಂಗಾರದ ಅಂಗಡಿ ವ್ಯಾಪಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿರುವ ವಾಸವಿ ಜ್ಯೂವೆಲರ್ಸ್ ಮಾಲೀಕನ ಪುತ್ರ ವಿನಯ್ ಎಂಬ ವ್ಯಾಪಾರಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಕಳ್ಳರು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ಖರೀದಿಸಿರುವ ಆರೋಪ ಕೇಳಿಬಂದಿದ್ದು, ಕಳ್ಳರು ಪೊಲೀಸರ ತನಿಖೆ ವೇಳೆ ನೀಡಿದ ಮಾಹಿತಿ ಆಧರಿಸಿ ಆರೋಪಿ ವಿನಯ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಇಂದು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಹಿರಿಯೂರಿಗೆ ಆಗಮಿಸಿದ್ದ ಸಿಸಿಬಿ ಪೊಲೀಸರು ಧಿಡೀರ್ ಅಂತ ವಾಸವಿ ಜ್ಯೂವೆಲ್ಲರಿ ಮೇಲೆ ದಾಳಿ ನಡೆಸಿದ್ದಾರೆ. ಬಂಗಾರದ ಅಂಗಡಿಯಲ್ಲಿದ್ದ ವಿನಯ್‍ನನ್ನು ಬಂಧಿಸಿ, ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರ ಕಾರನ್ನು ಹತ್ತಲು ಆರೋಪಿ ವಿನಯ್ ಅಂಗಡಿ ಮುಂಭಾಗದಲ್ಲಿ ಹೈಡ್ರಾಮಾ ಮಾಡಿದರೂ ಯಾವುದನ್ನು ಲೆಕ್ಕಿಸದೇ ಪೊಲೀಸರು ಅತನನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ:ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ: ಸತೀಶ್ ರೆಡ್ಡಿ






 Advertisement 




Sign in to your account
Username or Email Address


Password

 Remember Me


