ಬೆಂಗಳೂರು: ಇಂದು 1,826 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 33 ಜನ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 22,851 ಸಕ್ರಿಯ ಪ್ರಕರಣಗಳಿದ್ದು, ಸೋಂಕು ಹರಡುವಿಕೆ ಪ್ರಮಾಣ ಶೇ.1.09ರಷ್ಟಿದೆ.ಇವತ್ತು 1,618 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಟ್ಟು 1,67,237 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇನ್ನು ರಾಜಧಾನಿ ಬೆಂಗಳೂರಿನಲ್ಲಿಂದು 377 ಜನಕ್ಕೆ ಸೋಂಕು ತಗುಲಿದ್ದು, ಐವರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿಯೇ 8,290 ಸಕ್ರಿಯ ಪ್ರಕರಣಗಳಿವೆ.ರಾಜ್ಯದಲ್ಲಿ ಇದುವರೆಗೂ 29,22,875 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 36,881ಕ್ಕೇರಿಕೆಯಾಗಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.80 ರಷ್ಟಿದೆ. ಗದಗ ಮತ್ತು ಬೀದರ್ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.ಕರ್ನಾಟಕ 4 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ಪೂರೈಸಿದ್ದು ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ತರ ಮೈಲಿಗಲ್ಲು ಸಾಧಿಸಿದೆ. ರಾಜ್ಯದ ಒಟ್ಟು ಕೋವಿಡ್ ಪರೀಕ್ಷೆಗಳ ಪೈಕಿ ಶೇ.80% ಕ್ಕಿಂತ ಹೆಚ್ಚು ಆರ್ ಟಿ-ಪಿಸಿಆರ್ ಆಗಿದ್ದು, ಕರ್ನಾಟಕ ಇಡೀ ದೇಶದಲ್ಲೇ ಅತೀ ಹೆಚ್ಚು ಪರೀಕ್ಷೆಗಳು ನಡೆಸಿರುವ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.ಕರ್ನಾಟಕ 4 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ಪೂರೈಸಿದ್ದು ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ತರ ಮೈಲಿಗಲ್ಲು ಸಾಧಿಸಿದೆ.ರಾಜ್ಯದ ಒಟ್ಟು ಕೋವಿಡ್ ಪರೀಕ್ಷೆಗಳ ಪೈಕಿ ಶೇ.80% ಕ್ಕಿಂತ ಹೆಚ್ಚು ಆರ್ ಟಿ-ಪಿಸಿಆರ್ ಆಗಿದ್ದು, ಕರ್ನಾಟಕ ಇಡೀ ದೇಶದಲ್ಲೇ ಅತೀ ಹೆಚ್ಚು ಪರೀಕ್ಷೆಗಳು ನಡೆಸಿರುವ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದೆ. pic.twitter.com/pgRMtOSdlT— Dr Sudhakar K (@mla_sudhakar) August 11, 2021ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 13, ಬೆಳಗಾವಿ 47, ಬೆಂಗಳೂರು ಗ್ರಾಮಾಂತರ 26, ಬೆಂಗಳೂರು ನಗರ 377, ಬೀದರ್ 0, ಚಾಮರಾಜನಗರ 15, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 65, ಚಿತ್ರದುರ್ಗ 16, ದಕ್ಷಿಣ ಕನ್ನಡ 422, ದಾವಣಗೆರೆ 13, ಧಾರವಾಡ 17, ಗದಗ 0, ಹಾಸನ 175, ಹಾವೇರಿ 5, ಕಲಬುರಗಿ 4, ಕೊಡಗು 71, ಕೋಲಾರ 36, ಕೊಪ್ಪಳ 4, ಮಂಡ್ಯ 35, ಮೈಸೂರು 118, ರಾಯಚೂರು 2, ರಾಮನಗರ 6, ಶಿವಮೊಗ್ಗ 48, ತುಮಕೂರು 88, ಉಡುಪಿ 130, ಉತ್ತರ ಕನ್ನಡ 79, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.Sign in to your account
Username or Email Address


Password

 Remember Me


