ಮಂಡ್ಯ: ಮಾಸ್ಕ್ ಹಾಕಿಕೊಳ್ಳದ ಜನರನ್ನು ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿ ಜನರಿಗೆ ಸಂಸದೆ ಸುಮಲತಾ ಅಂಬರೀಶ್ ಕೊರೊನಾ ಜಾಗೃತಿ ಮೂಡಿಸಿದ್ದಾರೆ.ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯ ಕದಗಾರ್ ಗೂಳೇಶ್ವರಸ್ವಾಮಿ ದೇವಸ್ಥಾನದ ಕಳಶ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ಅಂಬರೀಶ್ ಅವರು ಆಗಮಿಸಿದ್ದರು. ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ವೇಳೆ ವೇಳೆ ಮಹಿಳೆಯರು ಸೇರಿದಂತೆ ಹಲವರು ಮಾಸ್ಕ್ ಹಾಕಿಕೊಂಡಿರಲಿಲ್ಲ. ಇದನ್ನು ಕಂಡ ಸಂಸದೆ ಸುಮಲತಾ ಅಂಬರೀಶ್ ಎಲ್ಲರೂ ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ ಈಗಾಗಲೇ ಸಾಕಷ್ಟು ಸಮಸ್ಯೆಗಳು ಬಂದಿವೆ ಎಂದು ಎಲ್ಲರಿಗೂ ಮಾಸ್ಕ್ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ: ಈಶ್ವರಪ್ಪಪೂಜೆಯ ಬಳಿಕ ದೇವಸ್ಥಾನದಿಂದ ಹೊರ ಭಾಗಕ್ಕೆ ಬಂದ ಸುಮಲತಾ ಅಂಬರೀಶ್ ಅವರನ್ನು ದೇವಸ್ಥಾನದ ಪಕ್ಕದ ಗಿಡಕ್ಕೆ ನೀರು ಹಾಕಲು ಗ್ರಾಮಸ್ಥರು ಕರೆದುಕೊಂಡು ಹೋದರು. ಈ ವೇಳೆ ಆರು ವರ್ಷದ ಹೆಣ್ಣು ಮಗು ಮಾಸ್ಕ್ ಹಾಕಿಕೊಳ್ಳದೆ ಸುಮಲತಾ ಅವರ ಬಳಿ ನಿಂತಿದ್ದಳು. ಆಗ ಸಂಸದೆ ಸುಮಲತಾ ಅವರು ಮಾಸ್ಕ್ ಹಾಕಿಕೊಳ್ಳಮ್ಮ ಎಂದು, ಮಗು ಕೈಯಲ್ಲಿ ಇದ್ದ ಮಾಸ್ಕ್ ತೆಗೆದುಕೊಂಡು ಸ್ವತಹ ಸುಮಲತಾ ಅವರೇ ಮಗುವಿಗೆ ಮಾಸ್ಕ್ ಹಾಕಿದರು.






 Advertisement 




Sign in to your account
Username or Email Address


Password

 Remember Me


