ಟೈಟಲ್ ನಿಂದಲೇ ಕ್ಯೂರಿಯಾಸಿಟಿ ಹುಟ್ಟುಹಾಕಿ ಗಮನ ಸೆಳೆದ ಚಿತ್ರ ‘ಫೋರ್ ವಾಲ್ಸ್ & ಟೂ ನೈಟೀಸ್’. ಖ್ಯಾತ ನಟ ಅಚ್ಯುತ್ ಕುಮಾರ್ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಸೆಟ್ಟೇರಿದ್ದ ಈ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಮೂಲಕ ಸುದ್ದಿಯಲ್ಲಿತ್ತು. ಇದೀಗ ಟೀಸರ್ ಮೂಲಕ ಚಿತ್ರತಂಡ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದೆ. ಅಚ್ಯುತ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದ ಕ್ಷಣಕ್ಕೆ ‘ಫೋರ್ ವಾಲ್ಸ್’ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದೆ.ಇದೊಂದು ತಂದೆ ಮಕ್ಕಳ ಕಥೆಯನ್ನೊಳಗೊಂಡ ಸಿನಿಮಾ. ಈ ಹಿಂದೆ ‘ಮಂತ್ರಂ’ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಯುವ ನಿರ್ದೇಶಕ ಎಸ್ ಎಸ್ ಸಜ್ಜನ್ ಎರಡನೇ ಪ್ರಯತ್ನವಿದು. ಚಿತ್ರಕ್ಕೆ ತಾವೇ ಕಥೆ ಕೂಡ ಬರೆದಿದ್ದಾರೆ. ‘ಮಂತ್ರಂ’ ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದ ನಿರ್ದೇಶಕರು ‘ಫೋರ್ ವಾಲ್ಸ್’ ಸಿನಿಮಾ ಮೂಲಕ ವಾಪಾಸ್ಸಾಗಿದ್ದಾರೆ. ಕಳೆದ ವರ್ಷದ ಆರಂದಲ್ಲಿ ಈ ಚಿತ್ರ ಸೆಟ್ಟೇರಿತ್ತು, ಇದೀಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ ಶಂಕ್ರಣ್ಣ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮೂರು ವಿಭಿನ್ನ ಗೆಟಪ್ ನಲ್ಲಿ ಅಚ್ಯುತ್ ಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಡಾ. ಪವಿತ್ರ ನಟಿಸಿದ್ದಾರೆ. ತಾರಾಬಳಗದಲ್ಲಿ ದತ್ತಣ್ಣ, ಸುಜಯ್ ಶಾಸ್ತ್ರಿ, ಡಾ.ಜಾನ್ವಿ ಜ್ಯೋತಿ, ಭಾಸ್ಕರ್ ನೀನಾಸಂ, ರಘು ರಮನಕೊಪ್ಪ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.ಎಸ್.ವಿ.ಪಿಕ್ಷರ್ಸ್ ಬ್ಯಾನರ್ ಅಡಿಯಲ್ಲಿ ಟಿ.ವಿಶ್ವನಾಥ್ ನಾಯ್ಕ್ ‘ಫೋರ್ ವಾಲ್ಸ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಡಿಆರ್ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದ್ದು, ಆನಂದ್ ರಾಜಾವಿಕ್ರಮ ಸಂಗೀತ ನಿರ್ದೇಶನ ‘ಫೋರ್ ವಾಲ್ಸ್’ ಚಿತ್ರಕ್ಕಿದೆ.Sign in to your account
Username or Email Address


Password

 Remember Me


