ಹುಬ್ಬಳ್ಳಿ: ಮಾಜಿ ಸಚಿವ ಸಂತೋಷ್ ಲಾಡ್ ಅವರು ಮಡ್ಕಿಹೊನ್ನಳ್ಳಿ ಅಲ್ಲಿರುವ ಅಮೃತ ನಿವಾಸದಲ್ಲಿ ಅಕ್ಕಚೀಲಗಳನ್ನು ತಾವೇ ಲಾರಿಯಿಂದ ಅನ್ಲೋಡ್ ಮಾಡಿ ಈಗ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.ಕಲಘಟಗಿ ಕ್ಷೇತ್ರದ ಪ್ರತಿ ಮನೆಗೆ ಅಕ್ಕಿ ವಿತರಣೆಗಾಗಿ ಅಕ್ಕಿಯನ್ನು ಲಾಡ್ ಅವರು ತರಿಸಿದ್ದು, ಲಾರಿಯಲ್ಲಿನ ಅಕ್ಕಿ ಚೀಲಗಳನ್ನು ತಾವೇ ಹೊತ್ತು ಇಳಿಸಿದ್ದಾರೆ. ಅಭಿಮಾನಿಗಳು ತಮ್ಮ ನಾಯಕ ಲಾಡ್ ಅವರ ಈ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈಗ ಆ ವೀಡಿಯೋ ವೈರಲ್ ಆಗಿದೆ.ಕೋವಿಡ್ ಸಂಕಷ್ಟದಿಂದ ಬಳಲಿದ ಕ್ಷೇತ್ರದ ಜನರಿಗೆ ಮಾಜಿ ಸಚಿವ ಸಂತೋಷ್ ಲಾಡ್ ಬಡವರು. ಕೂಲಿ ಕಾರ್ಮಿಕರು. ರೈತರ ಮನೆಗಳಿಗೆ ಅಕ್ಕಿ ವಿತರಣೆ ಮಾಡುತ್ತಿದ್ದು, ಅಕ್ಕಿ ಲೋಡ್ ಆಗಮಿಸಿದ ವೇಳೆ ತಾವೇ ಲಾರಿಯಿಂದ ಅಕ್ಕಿ ಚೀಲಗಳನ್ನ ಅನ್ ಲೋಡ್ ಮಾಡಿರುವುದು ಅವರ ಸರಳತೆಗೆ ಸಾಕ್ಷಿಯಾಗಿದೆ.Sign in to your account
Username or Email Address


Password

 Remember Me


