ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ದಾಳಿ ಶಾಕ್ ಮಧ್ಯೆ ಶಾಸಕ ಜಮೀರ್ ಅಹ್ಮದ್ ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋವು ಕೊಟ್ರಾ ಎಂಬ ಪ್ರಶ್ನೆಯೊಂದು ಮೂಡಿದೆ.ಕಷ್ಟದ ಸಮಯದಲ್ಲಿ ನಂಬಿಕೊಂಡಿದ್ದ ಸಿದ್ದರಾಮಯ್ಯ ಅವರು ಇಡಿ ದಾಳಿಯಾಗುತ್ತಿದ್ದಂತೆ ಕೈಬಿಟ್ರಾ ಅನ್ನೋ ಅನುಮಾನ ಮೂಡಿದೆ. ‘ಮುಂದಿನ ಸಿಎಂ’ ಅಂತ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ಜಮೀರ್ ಮನೆ ಮೇಲೆ ಇಡಿ ದಾಳಿಯಾಗುತ್ತಿದ್ದಂತೆ ಮಾಜಿ ಸಿಎಂ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರೇ ಹೀಗೆ ಮಾಡಿಬಿಟ್ರಲ್ಲಾ ಎಂದು ಜಮೀರ್ ಅವರು ತಮ್ಮ ಆಪ್ತರ ಮುಂದೆ ನೋವು ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಕಷ್ಟದ ಸಮಯದಲ್ಲಿ ನಂಬಿದ್ದ ಸಿದ್ದರಾಮಯ್ಯ ಕೈಬಿಟ್ಟರು. ಇ.ಡಿ ದಾಳಿ ಆಗ್ತಿದ್ದಂತೆಯೇ ಡಿಕೆಶಿ ನನ್ನ ನೆರವಿಗೆ ಬಂದರು. ನನ್ನ ನಾಯಕ ಅಂತ ನಂಬಿದ್ದ ಸಿದ್ದರಾಮಯ್ಯ ಒಂದೇ ಒಂದು ಮಾತಾಡ್ಲಿಲ್ಲ. ಇ.ಡಿ ದಾಳಿ ನೋವಲ್ಲಿ ಭೇಟಿಗೆ ಬರ್ತೇನೆ ಅಂದ್ರೂ ಸಿದ್ದರಾಮಯ್ಯ ಬೇಡ ಅಂದ್ರು. ನಾನು ನಂಬಿದ ನಾಯಕನೇ ಕಷ್ಟಕ್ಕೆ ಆಗಲಿಲ್ಲ. ಬೇರೆ ಏನಾಗಿದ್ರೂ ತಲೆ ಕೆಡಿಸಿಕೊಳ್ತಿರ್ಲಿಲ್ಲ, ಅವರು ಹೀಗೆ ಮಾಡಬಾರದಿತ್ತು. ನನ್ನ ಮನಸ್ಸೇ ಒಡೆದು ಹೋಯ್ತು, ಭಾರೀ ನೋವಾಗ್ತಿದೆ ಎಂದು ಜಮೀರ್ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೊಮ್ಮಾಯಿಗೆ ಕೈಕೊಟ್ರಾ ಬಿಎಸ್‍ವೈ – ಸಹಾಯಕ್ಕೆ ಹೈಕಮಾಂಡ್‍ಗೆ ಸಿಎಂ ಮೊರೆSign in to your account
Username or Email Address


Password

 Remember Me


