ಬೆಂಗಳೂರು: ಇವತ್ತು 1,338 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1,947 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾ ಮಹಾಮಾರಿ 31 ಜನರನ್ನು ಬಲಿ ಪಡೆದುಕೊಂಡಿದೆ.ಬೆಂಗಳೂರಿನಲ್ಲಿಂದು 315 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 8,198 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜಧಾನಿಯಲ್ಲಿಂದು 492 ಜನ ಗುಣಮುಖರಾಗಿದ್ದಾರೆ.ರಾಜ್ಯದಲ್ಲಿಂದು 1,26,400 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ರಾಜ್ಯದಲ್ಲಿ 22,676 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಸೋಂಕು ಹರಡುವಿಕೆ ಶೇಕಡಾವಾರು ಪ್ರಮಾಣ 1.05ರಷ್ಟಿದ್ರೆ, ಮರಣ ಪ್ರಮಾಣ ಶೇ.2.31 ರಷ್ಟು ದಾಖಲಾಗಿದೆ. ರಾಜ್ಯದಲ್ಲಿ ಇದುವರೆಗೂ 29,21,049 ಪ್ರಕರಣಗಳು ವರದಿಯಾಗಿದ್ದು, 36,848 ಮಂದಿ ಸಾವನ್ನಪ್ಪಿದ್ದಾರೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 3, ಬೆಳಗಾವಿ 21, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 315, ಬೀದರ್ 5, ಚಾಮರಾಜನಗರ 18, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 93, ಚಿತ್ರದುರ್ಗ 12, ದಕ್ಷಿಣ ಕನ್ನಡ 378, ದಾವಣಗೆರೆ 7, ಧಾರವಾಡ 16, ಗದಗ 0, ಹಾಸನ 47, ಹಾವೇರಿ 5, ಕಲಬುರಗಿ 5, ಕೊಡಗು 50, ಕೋಲಾರ 16, ಕೊಪ್ಪಳ 3, ಮಂಡ್ಯ 26, ಮೈಸೂರು 71, ರಾಯಚೂರು 1, ರಾಮನಗರ 6, ಶಿವಮೊಗ್ಗ 48, ತುಮಕೂರು 18, ಉಡುಪಿ 92, ಉತ್ತರ ಕನ್ನಡ 61, ವಿಜಯಪುರ 3 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಈಶ್ವರಪ್ಪಗೆ ಮಂಡೆ ಸರಿ ಇಲ್ಲ, ಬಿಜೆಪಿ ಶೀಘ್ರ ಚಿಕಿತ್ಸೆ ಕೊಡಿಸಲಿ: ವಿನಯ್ ಕುಮಾರ್ ಸೊರಕೆ ಸಲಹೆSign in to your account
Username or Email Address


Password

 Remember Me


