ತುಮಕೂರು: ಜೆ.ಸಿ ಮಾಧುಸ್ವಾಮಿ ಅವರು ಎರಡನೇ ಬಾರಿ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಳೆಯೂರು ಆಂಜನೇಯಸ್ವಾಮಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಸಚಿವರ ಸಮ್ಮುಖದಲ್ಲಿ ಹರಕೆ ತೀರಿಸಿದರು.ಮುಖ್ಯಮಂತ್ರಿ ಬದಲಾವಣೆ ಹಿನ್ನೆಲೆಯಲ್ಲಿ ಮಂತ್ರಿಮಂಡಲ ವಿಸರ್ಜನೆಯಾಗಿದ್ದು ಮಾಧುಸ್ವಾಮಿಗೆ ಸಚಿವ ಸ್ಥಾನ ಕೈತಪ್ಪುವ ಭೀತಿ ಬಿಜೆಪಿ ಕಾರ್ಯಕರ್ತರಲ್ಲಿ ಮನೆಮಾಡಿತ್ತು. ಸಚಿವ ಸ್ಥಾನ ಕೈತಪ್ಪಿದರೆ ತಾಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕಾರ್ಯ ಕುಂಠಿತವಾಗುವ ಭಯ ಅವರ ಅಭಿಮಾನಿಗಳಲ್ಲಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಯೋಧ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಲಿಟರಿ ಶಿವಣ್ಣನವರು ಮಧುಸ್ವಾಮಿ ಅವರಿಗೆ ಸಚಿವ ಸ್ಥಾನ ಲಭಿಸಿದರೆ ಆಂಜನೇಯಸ್ವಾಮಿ 101 ತೆಂಗಿನಕಾಯಿ ಪಡೆಯುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಸಚಿವರಿಗೆ ಮಂತ್ರಿಸ್ಥಾನ ಸಿಕ್ಕಿದ ಖುಷಿಯಲ್ಲಿ ಮಾಧುಸ್ವಾಮಿ ಅವರನ್ನು ದೇವಾಲಯಕ್ಕೆ ಬರಮಾಡಿಕೊಂಡು ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ದೇವರಿಗೆ 101 ತೆಂಗಿನಕಾಯಿ ಪಡೆಯಲಾಯಿತು.ಈ ಸಂದರ್ಭದಲ್ಲಿ ಸಚಿವರು ಮತ ಹಾಕಿದ ತಾಲೂಕಿನ ಜನರ ಋಣ ತೀರಿಸಲು ಅಭಿವೃದ್ಧಿ ಕೆಲಸ ಮಾಡುತ್ತೇನೆ. ರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ ಎಂಬ ಭರವಸೆ ನೀಡಿದರು. ಮಿಲಿಟರಿ ಶಿವಣ್ಣ, ಪುರಸಭೆ ಸದಸ್ಯ ರೇಣುಕಾ ಪ್ರಸಾದ್, ನಿರಂಜನ್ ಕೇಶವಮೂರ್ತಿ ನಾಮಿನಿ ಸದಸ್ಯರಾದ ಗೋವಿಂದರಾಜ್ ದೇವರಾಜ್ ಬಿಜೆಪಿ ಮುಖಂಡ ರಾಮು ಶೆಟ್ಟಿಕೆರೆ ವಿನಯ್ ಸೇರಿದಂತೆ ಹಲವರು ಮುಖಂಡರುಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಯಕ್ಷಗಾನ ರಂಗಸ್ಥಳದಲ್ಲೇ ಕುಸಿದು ಬಿದ್ದ ಅಮ್ಮುಂಜೆ ಮೋಹನ್ ಕುಮಾರ್Sign in to your account
Username or Email Address


Password

 Remember Me


