ಶಿವಮೊಗ್ಗ: ಕೆರೆ ಏರಿ ಮೇಲೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕವಡಿ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸವಾರ ಮೃತಪಟ್ಟಿದ್ದು, ಮತ್ತೋರ್ವ ಈಜಿ ದಡ ಸೇರುವ ಮೂಲಕ ಬಚಾವ್ ಆಗಿದ್ದಾನೆ.ಮೃತಪಟ್ಟ ವ್ಯಕ್ತಿಯನ್ನು ಹಾಲೇಶ್ (33) ಎಂದು ಗುರುತಿಸಲಾಗಿದ್ದು, ರೇವಣ್ಣಪ್ಪ ಬಚಾವ್ ಆಗಿದ್ದಾರೆ. ಸೋಮವಾರ ಸಂಜೆ ಮೃತ ಹಾಲೇಶ್ ಹಾಗೂ ರೇವಣ್ಣಪ್ಪ ದ್ವಿಚಕ್ರ ವಾಹನದಲ್ಲಿ ಕವಡಿ ಗ್ರಾಮದ ಕೆರೆ ಏರಿ ಮೇಲೆ ಹೋಗುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಈಜು ಬಾರದಿದ್ದರಿಂದ ಹಾಲೇಶ್ ಕೆರೆಯಲ್ಲಿ ಮುಳುಗಿ ಮೃತಪಟ್ಟರೇ, ರೇವಣ್ಣಪ್ಪ ಕೆರೆಯಲ್ಲಿ ಈಜುವ ಮೂಲಕ ದಡ ಸೇರಿಕೊಂಡಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸೊರಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಹಾಲೇಶ್ ಅವರ ಮೃತದೇಹ ಪತ್ತೆಗಾಗಿ ಶೋಧಕಾರ್ಯ ನಡೆಸಿದರು. ಸೋಮವಾರ ಸಂಜೆ ಕತ್ತಲು ಆಗಿದ್ದರಿಂದ ಕೆಲವು ಕಾಲ ಶೋಧ ಕಾರ್ಯ ನಡೆಸಿ ವಾಪಸ್ಸಾಗಿದ್ದರು. ಮಂಗಳವಾರ ಮುಂಜಾನೆ ಶೋಧ ಕಾರ್ಯ ಮುಂದುವರಿಸಿದ ಅಗ್ನಿಶಾಮಕ ಸಿಬ್ಬಂದಿ, ಮೃತ ಹಾಲೇಶ್ ಶವವನ್ನು ಹೊರಗೆ ತೆಗೆದಿದ್ದಾರೆ. ಘಟನೆ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


