ಬೆಂಗಳೂರು: ಚೆಷ್ಮಾ ಚೆಲುವೆ ರಶ್ಮಿಕಾ ಮಂದಣ್ಣ ಟಾಲಿವುಡ್ ಸೇರಿದಂತೆ ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಸಹ ಸಖತ್ ಬ್ಯುಸಿಯಾಗಿದ್ದು, ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಅದೇ ರೀತಿ ಜನಪ್ರಿಯತೆ ಸಹ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್ ಜಾಸ್ತಿಯಾಗುತ್ತಿದ್ದಾರೆ. ಇದೀಗ ಖುಷಿ ವಿಚಾರವೊಂದನ್ನು ಅವರು ಹಂಚಿಕೊಂಡಿದ್ದಾರೆ.ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್ ಕ್ರಶ್ ಆಗಿದ್ದು, ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಹೀಗಾಗಿ ಫ್ಯಾನ್ ಫಾಲೋವರ್ಸ್ ಪ್ರಮಾಣ ಸಹ ಏರುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಭಾರೀ ಜನಪ್ರಿಯತೆ ಗಳಿಸುತ್ತಿದ್ದಾರೆ. ಹೀಗಾಗಿ ಫಾಲೋವರ್ಸ್ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುತ್ತಿದೆ. ಇನ್‍ಸ್ಟಾಗ್ರಾಂನಲ್ಲಿ ಇದೀಗ ರಶ್ಮಿಕಾ ಮಂದಣ್ಣ ಬರೋಬ್ಬರಿ 20 ಮಿಲಿಯನ್, ಅಂದರೆ 2 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅರಿಶಿಣ ಬಣ್ಣದ ಟ್ಯೂಬ್ ಟಾಪ್ ಹಾಕಿರುವ ಫೋಟೋ ಪೋಸ್ಟ್ ಮಾಡುವ ಮೂಲಕ ಈ ಖುಷಿ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.  A post shared by Rashmika Mandanna (@rashmika_mandanna)ಕಾಜಲ್ ಅಗರ್ವಾಲ್ ಅವರಿಗೆ ಇನ್‍ಸ್ಟಾದಲ್ಲಿ 19.3 ಮಿಲಿಯನ್ ಹಿಂಬಾಲಕರಿದ್ದರೆ, ಕಿಯಾರಾ ಅಡ್ವಾಣಿಯವರಿಗೆ 1.83 ಕೋಟಿ, ಸಮಂತಾ ಅವರಿಗೆ 1.80, ಪೋಜಾ ಹೆಗ್ಡೆ 1.48 ಹಾಗೂ ವಿಜಯ್ ದೇವರಕೊಂಡ ಅವರು 1.26 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಪ್ರಸಿದ್ಧ ನಟ, ನಟಿಯರನ್ನು ಸಹ ರಶ್ಮಿಕಾ ಮಂದಣ್ಣ ಹಿಂದಿಕ್ಕಿದ್ದಾರೆ.ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಜಾಲತಾಣಗಳಲ್ಲಿ ಫಾಲೋವರ್ಸ್‍ಗಳ ಸಂಖ್ಯೆ ಏರುತ್ತಲೇ ಇದೆ. ಬ್ಯಾಕ್ ಟು ಬ್ಯಾಕ್ ಎರಡು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಸಾಮಾಜಿಕ ಜಾಲತಾಣಗಳಲ್ಲಿ ಸಹ ಸಖತ್ ಆ್ಯಕ್ಟಿವ್ ಆಗಿದ್ದಾರೆ.ನೆಚ್ಚಿನ ನಟಿಯ ಜನಪ್ರಿಯತೆ ಕಂಡು ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಲಕ್ಷಾಂತರ ಜನ ಅವರ ಇನ್‍ಸ್ಟಾ ಪೋಸ್ಟ್ ಲೈಕ್ ಮಾಡುತ್ತಿದ್ದಾರೆ. ಬಾಲಿವುಡ್‍ನಲ್ಲಿ ಮಿಷನ್ ಮಜ್ನು, ಗುಡ್ ಬೈ ಚಿತ್ರಗಳಲ್ಲಿ ತೊಡಗಿದ್ದಾರೆ. ಅದೇ ರೀತಿ ತಮಿಳಿನ ಸುಲ್ತಾನ್ ಚಿತ್ರದಲ್ಲಿ ಕಾರ್ತಿಕ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ತೆಲುಗಿನ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.Sign in to your account
Username or Email Address


Password

 Remember Me


