ಉಡುಪಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನವರು ಕುಡುಕ, ಸು… ಮಕ್ಕಳು ಎಂದು ಬೆಂಗಳೂರಿನ ವಿಧಾನಸೌಧ ಬಳಿ ಅವಾಚ್ಯವಾಗಿ ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಖಂಡಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಅವಾಚ್ಯ ಮತ್ತು ಅವಹೇಳನಕಾರಿ. ವಿಧಾನಸೌಧಕ್ಕೆ ಬಹಳ ಪಾವಿತ್ರ್ಯತೆ ಇದೆ. ಅಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಈಶ್ವರಪ್ಪ ಒಬ್ಬ ಅನಾಗರಿಕ ವ್ಯಕ್ತಿ ಎಂದರು. ಈಶ್ವರಪ್ಪನ ಮೆದುಳಿನ ಸಮತೋಲನ ತಪ್ಪಿದೆ. ಬಿಜೆಪಿ ಅವರ ಮೆದುಳಿನ ಪರೀಕ್ಷೆ ಮಾಡಿಸಬೇಕು. ತಲೆಯ ಪರೀಕ್ಷೆ ನಡೆಸದಿದ್ದರೆ ಮುಂದೆ ರಾಜ್ಯಕ್ಕೆ ಆಗಬಹುದಾದ ಅನಾಹುತ ಎದುರಿಸಬೇಕಾದೀತು ಎಂದರು. ಇದನ್ನೂ ಓದಿ: ಮೂರನೇ ಅಲೆ ಅಪ್ಪಳಿಸುವ ದಿನ ದೂರ ಇಲ್ಲ- ಉಡುಪಿ ಡಿಎಚ್‍ಒ ಆತಂಕಕಾರಿ ಮಾಹಿತಿಕೂಡಲೇ ಈಶ್ವರಪ್ಪ ಅವರನ್ನು ಚಿಕಿತ್ಸೆಗೆ ಒಳಪಡಿಸಬೇಕು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರು ಈಶ್ವರಪ್ಪನವರ ಮೆದುಳಿಗೂ ನಾಲಿಗೆಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆಗಾಗ ಇದು ಸಾಬೀತಾಗುತ್ತಿದೆ. ಶೀಘ್ರ ಈಶ್ವರಪ್ಪರಿಗೆ ಚಿಕಿತ್ಸೆ ಕೊಡಿಸಿ ಎಂದು ಬಿಜೆಪಿ ನಾಯಕರಿಗೆ ಮಾಜಿ ಸಚಿವ ವಿನಯ್ ಕುಮಾರ ಸೊರಕೆ ಸಲಹೆ ನೀಡಿದರು. ಇದನ್ನೂ ಓದಿ: ಹಿಂದುತ್ವ ನನ್ನ ಮೊದಲ ಆಯ್ಕೆ ಆಮೇಲೆ ಸಚಿವ, ಶಾಸಕ ಸ್ಥಾನ: ಸುನೀಲ್ ಕುಮಾರ್


 Advertisement 







 Advertisement 




Sign in to your account
Username or Email Address


Password

 Remember Me


