ಬೆಂಗಳೂರು/ಆನೇಕಲ್: ನಿರ್ಮಾಣ ಹಂತದ ಕಟ್ಟಡದಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಣಿ ಮೃತನಾಗಿದ್ದಾನೆ. ಈತ ಕಟ್ಟಡದ ಮೇಸ್ತ್ರಿ ಕೆಲಸ ಮಾಡುತ್ತಿದ್ದನು. ಪರಿಚಿತನ ಜೊತೆ ಎಣ್ಣೆ ಪಾರ್ಟಿ ಮಾಡಿರೋದು ಈ ಕೊಲೆಗೆ ಕಾರಣವಾಗಿದೆ. ಇದನ್ನೂ ಓದಿ: ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾನಿನ್ನೆ ರಾತ್ರಿ ತನ್ನ ಪರಿಚಿತನೊಂದಿಗೆ ಎಣ್ಣೆ ಪಾರ್ಟಿ ನಡೆಸಿದ್ದು, ಈ ವೇಳೆ ಮೇಸ್ತ್ರಿ ಹಾಗೂ ಪರಿಚಿತನ ನಡುವೆ ಗಲಾಟೆ ನಡೆದಿದೆ. ಎಣ್ಣೆ ಅಮಲಿನಲ್ಲಿದ್ದ ಮೇಸ್ತ್ರಿಯ ಪರಿಚಿತ ಕೈಗೆ ಸಿಕ್ಕ ಮಾರಕಾಸ್ತ್ರದಿಂದ ಮೇಸ್ತ್ರಿಯನ್ನು ಕೊಚ್ಚಿ ಬರ್ಬರವಾಗಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ತಡರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಗಾರೆಕೆಲಸದ ಸಿಬ್ಬಂದಿ ನೋಡಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಕೊಲೆಗಾರನ ಬಂಧನಕ್ಕೆ ಬಲೆ ಬೀಸಿದ್ದಾರೆ.






 Advertisement 




Sign in to your account
Username or Email Address


Password

 Remember Me


