ಮಡಿಕೇರಿ: ಪಕ್ಕದ ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕು ಅಬ್ಬರಿಸುತ್ತಿರುವಾಗಲೇ  ಕೊಡಗಿನ ನೆಲ್ಯಹುದಿಕೇರಿಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದೆ.ಕಳೆದ ಮೂರು ದಿನಗಳಲ್ಲಿ 72 ಜನರಿಗೆ ಸೋಂಕು ಬಂದಿದೆ. ಸೋಂಕು ಸ್ಫೋಟಗೊಳ್ಳುತ್ತಿದ್ದಂತೆ ನೆಲ್ಯಹುದಿಕೇರಿಯ ಜನರು ಲಸಿಕೆ ಪಡೆಯಲು  ಮುಗಿಬಿದ್ದಿದ್ದಾರೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದ್ದು ಬೆಳಿಗ್ಗೆ 6 ಗಂಟೆಯಿಂದಲೇ ಲಸಿಕೆಗಾಗಿ ಜನರು ಒಬ್ಬರ ಮೇಲೊಬ್ಬರು ಮುಗಿಬೀಳುತ್ತಿದ್ದಾರೆ.ಈ ಗ್ರಾಮದೊಂದಿಗೆ ಕೇರಳಿಗರ ಸಂಪರ್ಕ ಜಾಸ್ತಿ ಇರುವುದರಿಂದ ಕೋವಿಡ್ ಇಲ್ಲಿ ಹೀಗೆ ಕೋವಿಡ್ ಸ್ಫೋಟಗೊಳ್ಳಲು ಕಾರಣ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ. ಇದನ್ನೂ ಓದಿ : ಬ್ರಿಟಿಷ್ ಹೈಕಮಿಷನರ್‌ಗೆ ಕನ್ನಡ ಪಾಠ ಹೇಳಿಕೊಟ್ಟ ದ್ರಾವಿಡ್ಯಾರಿಗೆ ಕೋವಿಡ್ ಸೋಂಕು ದೃಢಪಟ್ಟರೂ ತಕ್ಷಣವೇ ಅವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿ ಎಂದು ಈಗಾಗಲೇ ತಹಶೀಲ್ದಾರ್ ಮತ್ತು ಟಿಎಚ್‍ಒ ಅವರಿಗೆ ಸೂಚಿಸಿದ್ದೇನೆ. ಜೊತೆಗೆ ಈ ಗ್ರಾಮದಲ್ಲಿ ಜನ ಸಂಖ್ಯೆ ಜಾಸ್ತಿ ಇದೆ. ಆದರೆ ನಿತ್ಯ ಇಲ್ಲಿಗೆ ಕೇವಲ ನೂರು ಡೋಸ್ ವ್ಯಾಕ್ಸಿನ್ ಪೂರೈಕೆ ಆಗುತ್ತಿದೆ. ಇದು ಸರಿಯಲ್ಲ. ಕೂಡಲೇ ಹೆಚ್ಚಿನ ಪ್ರಮಾಣದಲ್ಲಿ ಸ್ವ್ಯಾಬ್ ಟೆಸ್ಟ್ ಮಾಡುವುದರ ಜೊತೆಗೆ ವ್ಯಾಕ್ಸಿನ್ ವಿತರಣೆ ಆಗಬೇಕು ಎಂದು ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


