ವಿಜಯಪುರ: ನನಗೆ ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಯಾವ ಖಾತೆ ಕೊಟ್ಟಿದ್ದಾರೋ ಆ ಖಾತೆಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು ನನ್ನ ಉದ್ದೇಶ ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.ಇವತ್ತು ಮಹಾಪೂರ ಬರ್ತಿದೆ, ಕೊರೊನಾ ಇದೆ. ಇಂತಹ ಸಂದರ್ಭದಲ್ಲಿ ಅಸಮಾಧಾನ ಪಡುವುದು ಸರಿಯಲ್ಲ. ಕೊಟ್ಟಂತಹ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ ದೇವಸ್ಥಾನ ಅಭಿವೃದ್ಧಿಗೆ ನಾನು ಬದ್ಧಳಾಗಿದ್ದೇನೆ. ಹೊರ ರಾಜ್ಯ ದೇವಸ್ಥಾನಗಳಿಗೆ ತೆರಳುವ ನಮ್ಮ ರಾಜ್ಯ ಭಕ್ತರಿಗೆ ಎಲ್ಲ ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರಿಗೆ, ಕೆಲಸ ಮಾಡುವವರಿಗೆ ಯಾವ ಖಾತೆ ಇದ್ದರೆ ಏನು, ಕೆಲಸ ಮಾಡುವ ಇಚ್ಛೆ ಇದ್ದು, ಜನರಿಗೆ ಸ್ಪಂದಿಸುವ ಇಚ್ಛೆ ಇದೆ ಅಂದರೆ ಸಾಕು ಎಂದು ಖಾತೆ ಕ್ಯಾತೆ ತೆಗೆದವರಿಗೆ ಟಾಂಗ್ ನೀಡಿದ್ದಾರೆ. ಎಂತಹದೇ ಖಾತೆ ಇದ್ದರೂ ಅದರ ಮುಖಾಂತರ ನಾವು ಕೆಲಸ ಮಾಡಬಹುದು. ಈ ರೀತಿ ಅಸಮಾಧಾನ ಆಗುತ್ತಿರುವುದು ಅವರಿಗೆ ಬಿಟ್ಟ ವಿಷಯ. ಇದು ಬಹಳ ದೊಡ್ಡ ವಿಷಯ ಅಲ್ಲ. ಸ್ವಲ್ಪ ಅಸಮಧಾನ ಇರಬಹುದು. ಅದು ನಿವಾರಣೆ ಆಗುತ್ತೆ. ಅವರವರು ಅವರ ಖಾತೆಯನ್ನು ಮುಂದುವರೆಸುತ್ತಾರೆ ಎಂಬ ವಿಶ್ವಾಸ ಇದೆ. ಇದನ್ನು ನಮ್ಮ ಪಕ್ಷದ ಹಿರಿಯರು ಬಗೆಹರಿಸುತ್ತಾರೆಂಬ ವಿಶ್ವಾಸ ಇದೆ ಎಂದಿದ್ದಾರೆ. ಇದನ್ನೂ ಓದಿ:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿಗೆ ಸ್ಥಳೀಯರಿಂದ ಗೂಸ






 Advertisement 




Sign in to your account
Username or Email Address


Password

 Remember Me


