ಚಿತ್ರದುರ್ಗ: ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಸ್ಥಳೀಯರು ಭರ್ಜರಿ ಗೂಸ ಕೊಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶುಗರ್ ಫ್ಯಾಕ್ಟರಿಯ ಕಾರ್ಮಿಕರಿಗಾಗಿ ನಿರ್ಮಿಸಿರುವ ಸಾಲು ಮನೆಗಳ ಬಳಿ ಬಾಡಿಗೆ ಮನೆಯಲ್ಲಿ ಕಳೆದ ಒಂದು ತಿಂಗಳಿಂದ ವಾಸವಾಗಿದ್ದ ತುಮಕೂರು ಜಿಲ್ಲೆ ಶಿರಾ ಮೂಲದ ತಿಪ್ಪಯ್ಯ(42) ಎಂಬ ಕಾಮುಕ 8 ವರ್ಷದ ಅಪ್ರಾಪ್ತ ಬಾಲಕಿಗೆ ಚಾಕ್ಲೇಟ್ ಆಮಿಷವೊಡ್ಡಿ ಕರೆದೊಯ್ದು, ಬಾಲಕಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಆಗ ಬಾಲಕಿ ಗಾಬರಿಗೊಂಡು ಜೋರಾಗಿ ಕಿರುಚಿದ್ದಾಳೆ. ಬಾಲಕಿ ಅಳುತ್ತಿರುವ ಶಬ್ಧ ಕೇಳಿದ ಅಲ್ಲಿನ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮನೆಯಲ್ಲಿನ ಸ್ಥಿತಿ ಕಂಡು ತೀವ್ರ ಆಕ್ರೋಶಗೊಂಡಿರುವ ಸ್ಥಳೀಯರು ಆರೋಪಿ ತಿಪ್ಪಯ್ಯಗೆ ಭರ್ಜರಿ ಧರ್ಮದೇಟು ನೀಡಿದ್ದಾರೆ.  ಇದನ್ನೂ ಓದಿ :ಮಲೆನಾಡಲ್ಲಿ ಮಳೆಯಬ್ಬರ – ಸಿಡಿಲಿಗೆ ಗೃಹಪಯೋಗಿ ವಸ್ತುಗಳು ನಾಶಈ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಮುಂದಾದ ಸಾರ್ವಜನಿಕರ ಪ್ರಯತ್ನ ಗಮನಿಸಿದ ಆರೋಪಿ ಅಲ್ಲಿಂದ ಅನಾರೋಗ್ಯದ ಡ್ರಾಮಾ ಮಾಡಿ ಎಸ್ಕೇಪ್ ಆಗಿದ್ದಾನೆ. ಇನ್ನು ಬಾಲಕಿಯ ಪೋಷಕರು ಸಹ ಮಾರ್ಯಾದೆಗೆ ಅಂಜಿ ದೂರು ದಾಖಲಿಸಲು ಹಿಂದೇಟು ಹಾಕಿದ್ದು, ಆರೋಪಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡು, ಧರ್ಮದೇಟು ನೀಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.  ಇದನ್ನೂ ಓದಿ :ಯುವ ಪ್ರೇಮಿಗಳೇ ದರೊಡೆಕೋರರ ಟಾರ್ಗೆಟ್- ಪೊಲೀಸರ ಸೋಗಿನಲ್ಲಿ ದೋಚುತ್ತಿದ್ದ ಮೂವರ ಬಂಧನ






 Advertisement 




Sign in to your account
Username or Email Address


Password

 Remember Me


