ಬೆಂಗಳೂರು: ರಾಜ್ಯದಲ್ಲಿ ಇಂದು 1,598 ಕೇಸ್ ಪತ್ತೆಯಾಗಿದ್ದು, 20 ಜನರನ್ನು ಮಹಾಮಾರಿ ಬಲಿ ಪಡೆದಿದೆ. 1,914 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.ರಾಜ್ಯದಲ್ಲಿ 23,930 ಸಕ್ರಿಯ ಪ್ರಕರಣಗಳಿದ್ದು, ಕೊರೊನಾ ಸೋಂಕಿನ ಪ್ರಮಾಣ ಶೇ.1.09ರಷ್ಟಿದೆ. ಸಾವಿನ ಪ್ರಮಾಣ ಶೇ.1.25ರಷ್ಟಿದೆ. ಈ ವರೆಗೆ ಒಟ್ಟು 29,18,525 ಕೊರೊನಾ ಕೇಸ್ ಪತ್ತೆಯಾಗಿವೆ. 36,793 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು 1,46,446 ಕೊರೊನಾ ಟೆಸ್ಟ್ ಮಾಡಲಾಗಿದೆ.ಬೆಂಗಳೂರಿನಲ್ಲಿ ಇಂದು 348 ಕೇಸ್ ದಾಖಲಾಗಿದ್ದು, 1 ಜನ ಕೊರೊನಾಗೆ ಬಲಿಯಾಗಿದ್ದಾರೆ. 366 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 8,493 ಸಕ್ರಿಯ ಪ್ರಕರಣಗಳಿವೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 2, ಬಳ್ಳಾರಿ 10, ಬೆಳಗಾವಿ 37, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 348, ಬೀದರ್ 2, ಚಾಮರಾಜನಗರ 22, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 52, ಚಿತ್ರದುರ್ಗ 22, ದಕ್ಷಿಣ ಕನ್ನಡ 438, ದಾವಣಗೆರೆ 15, ಧಾರವಾಡ 7, ಗದಗ 1, ಹಾಸನ 80, ಹಾವೇರಿ 2, ಕಲಬುರಗಿ 5, ಕೊಡಗು 83, ಕೋಲಾರ 36, ಕೊಪ್ಪಳ 7, ಮಂಡ್ಯ 31, ಮೈಸೂರು 98, ರಾಯಚೂರು 4, ರಾಮನಗರ 0, ಶಿವಮೊಗ್ಗ 37, ತುಮಕೂರು 38, ಉಡುಪಿ 129, ಉತ್ತರ ಕನ್ನಡ 53, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ.Sign in to your account
Username or Email Address


Password

 Remember Me


