ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ಎರಡು ಸಾವಿರದ ಸನಿಹಕ್ಕೆ ಕೇಸ್ ಗಳು ದಾಖಲಾಗ್ತಿವೆ. ಇಂದು ಕೂಡ ರಾಜ್ಯದಲ್ಲಿ 1,610 ಕೊವಿಡ್ ಕೇಸ್ ದಾಖಲಾಗಿದ್ದು, 32 ಜನ ಸಾವನ್ನಪ್ಪಿದ್ದಾರೆ. ಇನ್ನೂ ಪಾಸಿಟಿವಿಟಿ ರೇಟ್ ಶೇ.1.08ಕ್ಕೆ ಏರಿಕೆಯಾಗಿದೆ. 100 ಜನರಿಗೆ ಟೆಸ್ಟ್ ಮಾಡಿದ್ರೆ ಇಬ್ಬರಿಗೆ ಪಾಸಿಟಿವ್ ಆಗ್ತಿದೆ.ಬೆಂಗಳೂರಿನಲ್ಲಿ ಕೂಡ ಇಂದು 357 ಕೊರೊನಾ ಪ್ರಕರಣಗಳು ವರದಿಯಾಗಿದೆ. ಬೆಂಗಳೂರಿನಲ್ಲಿ ಕೊರೊನಾಗೆ 05 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ರಾಜ್ಯದಲ್ಲಿ ಇಂದು 1,640 ಮಂದಿ ಡಿಸ್ಚಾರ್ಜ್ ಆಗಿದ್ದು, ಬೆಂಗಳೂರಿನಲ್ಲಿ 400 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆಇಂದು ರಾಜ್ಯದಲ್ಲಿ ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ 24,266ಕ್ಕೆ ಏರಿಕೆಯಾಗಿದೆ. ಜೊತೆಗೆ ಇಂದು ಕೋವಿಡ್ ಟೆಸ್ಟ್ ಕೂಡ ಒಂದು ಲಕ್ಷಕ್ಕೂ ಹೆಚ್ಚು ಆಗಿದೆ. 1,47,859 ಮಂದಿಗೆ ಕೋವಿಡ್ ಟೆಸ್ಟ್ ಆಗಿದ್ದು, 1,605 ಪಾಸಿಟಿವ್ ಆಗಿರೋದು ಕೊರೋನಾ ಕಂಟ್ರೋಲ್ ನಲ್ಲಿ ಇರುವುದು ಗೊತ್ತಾಗ್ತಿದೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಳ್ಳಾರಿ 9, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 357, ಬೀದರ್ 2, ಚಾಮರಾಜನಗರ 27, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 66, ಚಿತ್ರದುರ್ಗ 20, ದಕ್ಷಿಣ ಕನ್ನಡ 342, ದಾವಣಗೆರೆ 8, ಧಾರವಾಡ 11, ಗದಗ 3, ಹಾಸನ 129, ಹಾವೇರಿ 2, ಕಲಬುರಗಿ 4, ಕೊಡಗು 81, ಕೋಲಾರ 33, ಕೊಪ್ಪಳ 2, ಮಂಡ್ಯ 27, ಮೈಸೂರು 141, ರಾಯಚೂರು 10, ರಾಮನಗರ 5, ಶಿವಮೊಗ್ಗ 37, ತುಮಕೂರು 53, ಉಡುಪಿ 131, ಉತ್ತರ ಕನ್ನಡ 55, ವಿಜಯಪುರ, ಬಾಗಲಕೋಟೆ ಮತ್ತು ಯಾದಗಿರಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.ಇಂದಿನ 07/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/9wDwzQYeAR @CMofKarnataka @BSBommai @Comm_dhfwka @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/SstDQ2b6h2— K'taka Health Dept (@DHFWKA) August 7, 2021Sign in to your account
Username or Email Address


Password

 Remember Me


