ಕಳೆದ ವಾರ ಕಿಚ್ಚ ಸುದೀಪ್ ಅರವಿಂದ್‍ಗೆ ದಿವ್ಯಾ ಉರುಡುಗ ಹೇರ್ ಕಟ್ ಮಾಡುವಂತೆ ಟಾಸ್ಕ್ ನೀಡಿದ್ದರು. ಅದರಂತೆ ಅರವಿಂದ್ ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡಿದ್ದಾರೆ.ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡಲು ಬೇಕಾದ ಸಾಮಾಗ್ರಿಗಳನ್ನು ಬಿಗ್‍ಬಾಸ್ ಅರವಿಂದ್‍ಗೆ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ದಿವ್ಯಾ ಉರುಡುಗ ಬಿಗ್‍ಬಾಸ್ ಎಂದು ಗೋಳಾಡುತ್ತಾ ಬಾತ್ ರೂಂ ಏರಿಯಾಗೆ ಹೋಗುತ್ತಾರೆ. ನಂತರ ಅರವಿಂದ್ ಡಿಯುಗೆ ಕ್ರಾಫ್ ತೆಗೆದು ತಲೆ ಬಾಚಲು ಶುರು ಮಾಡುತ್ತಾರೆ. ಈ ಮಧ್ಯೆ ದಿವ್ಯಾ ಉರುಡುಗ ನನಗೆ ಯಾವ ಭಯ ಕೂಡ ಇಲ್ಲ. ನೀವು ಚೆನ್ನಾಗಿ ಹೇರ್ ಕಟ್ ಮಾಡುತ್ತೀರಾ ಎಂಬ ನಂಬಿಕೆ ಇದೆ ಎಂದು ಧೈರ್ಯ ತುಂಬುತ್ತಾರೆ.ಈ ನಡುವೆ ಹೇರ್ ಕಟ್ ಮಾಡುವ ವೇಳೆ ಜೊತೆಗಿದ್ದು, ರೇಗಿಸುತ್ತಿದ್ದರೆ ಮಜಾವಾಗಿರುತ್ತಿತ್ತು ಎಂದು ಮಂಜು ಪ್ರಶಾಂತ್ ಬಳಿ ಮಾತನಾಡುತ್ತಿರುವಾಗವಾಗ, ನಾನು ಸಹಜವಾಗಿ ನಾವೆಲ್ಲರೂ ಜೊತೆಯಾಗಿದ್ದರೆ, ಡಿಸ್ಟರ್ಬ್ ಆಗಿ ಬಿಡುತ್ತೀರಾ ಎಂದು ಹೇಳಿದೆ. ಅದನ್ನೇ ಅವರು ಗಂಭೀರವಾಗಿ ತೆಗೆದುಕೊಂಡು ನಾವಿಬ್ಬರೇ ಹೇರ್ ಕಟ್ ಮಾಡಿಕೊಂಡು ಬರುತ್ತೇವೆ ಯಾರು ಇರಬೇಡಿ ಅಂತ ಹೇಳಿದ್ರು ಎಂದು ಹೇಳಿದ್ದಾರೆ.ಬಳಿಕ ಅರವಿಂದ್‍ಗೆ ಕೂದಲನ್ನು ಹೇಗೆ ಕ್ರಾಫ್ ತೆಗೆದು, ಹೇಗೆ ಕಟ್ ಮಾಡಬೇಕು ಎಂದು ದಿವ್ಯಾ ಉರುಡುಗ ಗೈಡ್ ಮಾಡುತ್ತಾ ಹೋಗುತ್ತಾರೆ, ಅದರಂತೆ ಅರವಿಂದ್ ಮಿರರ್ ಮುಂದೆ ಹೇರ್ ಕಟ್ ಮಾಡಲು ಆರಂಭಿಸುತ್ತಾರೆ. ಈ ವೇಳೆ ಕೂದಲು ಕಟ್ ಮಾಡುವ ಎಕ್ಸ್ ಪಿರಿಯನ್ಸ್ ಹೇಗಿದೆ ಎಂಬ ದಿವ್ಯಾ ಪ್ರಶ್ನೆಗೆ ಅರವಿಂದ್ ಒಂದು ರೀತಿ ಭಯ ಆಗುತ್ತಿದೆ. ನಮ್ಮದಾದರೆ ಹೆಚ್ಚು ಕಡಿಮೆಯಾದರೆ ಒಂದೇ ಬಾರಿ ಎಲ್ಲಾ ಹೇರ್‍ನನ್ನು ಸುಲಭವಾಗಿ ಕಟ್ ಮಾಡಿಬಿಡಬಹುದು. ಆದರೆ ನಿಮ್ಮದು ಆ ರೀತಿಯಲ್ಲ ಎಂದು ಫ್ರಂಟ್ ಕಟ್ ಹಾಗೂ ವೀ ಶೆಪ್ ಹೇರ್ ಕಟ್ ಮಾಡಿದ್ದಾರೆ.ಕೊನೆಗೆ ಅರವಿಂದ್ ಮಾಡಿದ ಹೇರ್ ಕಟ್‍ನನ್ನು ಡಿಯು ಮನೆಯ ಇತರ ಸ್ಪರ್ಧಿಗಳಿಗೆ ತೋರಿಸಿದ್ದಾರೆ. ಈ ವೇಳೆ ಎಲ್ಲರೂ ಹೇರ್ ಕಟ್ ಬಹಳ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಅರವಿಂದ್‍ಗೆ ಹೇರ್ ಕಟ್ ಚಾಲೆಂಜ್ ಕೊಟ್ಟ ಸುದೀಪ್ – ಡಿಯು ಕೂದಲ ಗತಿಯೇನು?






 Advertisement 




Sign in to your account
Username or Email Address


Password

 Remember Me


