ಬಿಗ್‍ಬಾಸ್ ಸೀಸನ್-8ರ ಗ್ರಾಂಡ್ ಫಿನಾಲೆಗೆ ಇನ್ನೇನು ಕೌಂಟ್‍ಡೌನ್ ಸ್ಟಾರ್ಟ್ ಆಗಿದೆ. ಹೀಗಾಗಿ ಮನೆಯ ಸ್ಪರ್ಧಿಗಳು ಫಿನಾಲೆಯಲ್ಲಿ ಮಿಂಚಲು ಬಿಗ್‍ಬಾಸ್, ಸೆಲೆಬ್ರೆಟಿಗಳಿಗೆ ಸ್ಟೈಲಿಶ್ ಆಗಿ ಹೇರ್ ಕಟ್ ಮಾಡುವ ತಂಡವನ್ನು ಬಿಗ್‍ಬಾಸ್ ಮನೆಗೆ ಕಳುಹಿಸಿದ್ದರು.ಮೊದಲಿಗೆ ಹೇರ್ ಸ್ಟೈಲಿಶ್‍ರನ್ನು ನೋಡಿ ದೊಡ್ಮನೆ ಮಂದಿ ಫುಲ್ ಶಾಕ್ ಆಗುತ್ತಾರೆ. ನಂತರ ಎಲ್ಲರೂ ಒಬ್ಬೊಬ್ಬರೇ ಹೇರ್ ಸ್ಟೈಲ್, ಫೇಶಿಯಲ್ ಮುಂತಾದವುಗಳನ್ನು ಮಾಡಿಸಿಕೊಂಡಿದ್ದಾರೆ.ಮಂಜು, ಅರವಿಂದ್, ಪ್ರಶಾಂತ್ ಹೇರ್ ಕಟ್ ಹಾಗೂ ಹೇರ್ ಸ್ಟೈಲ್ ಮಾಡಿಸಿಕೊಂಡರೆ, ದಿವ್ಯಾ ಉರುಡುಗ ವೈಷ್ಣವಿ ಹೇರ್ ಕಟ್, ಫೇಶಿಯಲ್, ಪೆಡಿಕ್ಯೂರ್ ಮಾಡಿಸಿಕೊಂಡಿಸಿಕೊಂಡಿದ್ದಾರೆ. ಇದೇ ವೇಳೆ ಒಬ್ಬ ಹೇರ್ ಸ್ಟೈಲಿಶ್ ಆಗಿ ನನಗೆ ನಾನೇ ಹೇರ್ ಕಟ್ ಮಾಡಿಕೊಳ್ಳುವುದ ಬಹಳ ಕಷ್ಟ, ಆದರೆ ನೀವು ನಿಮಗೆ ಹೇರ್ ಸ್ಟೈಲ್ ಮಾಡಿಕೊಳ್ಳುತ್ತೀರಾ ಎಂದಾಗ, ಅರವಿಂದ್ ನಾನು ವಿದೇಶ ಪ್ರಯಾಣ ಮಾಡುವಾಗ ಅಲ್ಲಿ ಒಂದು ಹೇರ್ ಕಟ್‍ಗೆ 25 ಡಾಲರ್ಸ್ ತೆಗೆದುಕೊಳ್ಳುತ್ತಾರೆ. ಹಾಗಾಗಿ ನಾನು ಆ ಡಾಲರ್‍ನನ್ನು ಉಳಿಸುವುದಕ್ಕೆ ನನಗೆ ನಾನೇ 2010ರಿಂದ ಹೇರ್ ಸ್ಟೈಲ್ ಮಾಡಿಕೊಳ್ಳಲು ಆರಂಭಿಸಿದೆ. ಈ ಮಧ್ಯೆ ಮಂಜು ಮನೆಗೆ ಬಂದ ಹೇರ್ ಸ್ಟೈಲಿಶ್‍ಗಳಿಗೆ ಮನೆಗೆ ಬಂದವರಿಗೆ ಊಟ ಮಾಡಿಕೊಂಡು ಹೋಗಿ, ಚಿಕನ್ ತಿನ್ನುತ್ತೀರಾ ಮಟನ್ ತಿನ್ನುತ್ತೀರಾ ಎಂದು ಕೇಳುತ್ತಾ, ಬಳಿಕ ಬರೀ ಎಗ್‍ರೈಸ್ ಮಾಡಿದ್ದೇವೆ ಅದನ್ನೇ ಎರಡು ಸ್ಪೂನ್ ತಿಂದುಕೊಂಡು ಹೋಗಿ ಎಂದು ಹಾಸ್ಯ ಮಾಡಿದ್ದಾರೆ.ಒಟ್ಟಾರೆ ಬಿಗ್‍ಬಾಸ್ ಗ್ರಾಂಡ್ ಫಿನಾಲೆಗೆ ಮನೆಮಂದಿಯೆಲ್ಲಾ ಟಿಪ್‍ಟಾಪ್ ಆಗಿ ಕಾಣಲು ಭರ್ಜರಿಯಾಗಿ ತಯಾರಿಯಾಗುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


