ಕಾರವಾರ: ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ (ರಾಷ್ಟ್ರೀಯ ತನಿಖಾ ದಳ) ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ದಾಳಿ ನಡೆಸಿದೆ. ಭಟ್ಕಳದ ಉಮರ್ ಸ್ಟ್ರೀಟ್, ತೆಂಗಿನ ಗುಂಡಿ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದೆ.ಭಟ್ಕಳದ ಅಮೀನ್ ಜುವೇಬ್ ಹಾಗೂ ಜವಾದ್ ಇಬ್ಬರನ್ನು ತೀವ್ರ ತನಿಖೆ ನಡೆಸುತ್ತಿದ್ದು, ಈ ಹಿಂದೆ ದುಬೈ ನಲ್ಲಿ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ಓರ್ವನ ತಮ್ಮನನ್ನೂ ಎನ್‍ಐಎ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಮಾಜಿ ಶಾಸಕ ಇದಿನಬ್ಬನವರ ಮೊಮ್ಮಗನಿಗೆ ಐಸಿಸ್ ನಂಟು – ಎನ್‍ಐಎಯಿಂದ ಅರೆಸ್ಟ್ಸ್ಥಳದಲ್ಲಿ ಕೆಎಸ್‍ಆರ್ ಪಿ ತುಕಡಿ ಜಮಾವಣೆ ಮಾಡಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮೊಕ್ಕಾಂ ಹೂಡಿದ್ದಾರೆ. ವಶಕ್ಕೆ ಪಡೆದವರಿಗೆ ಐಸಿಸ್ ನಂಟಿರುವ ಕುರಿತು ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಉಗ್ರರ ಜೊತೆ ನಂಟು ಶಂಕೆ – ಮಾಜಿ ಶಾಸಕ ಇದಿನಬ್ಬ ಮಗನ ಮನೆ ಮೇಲೆ ಎನ್‍ಐಎ ದಾಳಿSign in to your account
Username or Email Address


Password

 Remember Me


