ಬೆಂಗಳೂರು: ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದು ಕಾಂಗ್ರೆಸ್ ಮಾಜಿ ಸಚಿವ ರೋಷನ್ ಬೇಗ್ ಅವರು ತಿಳಿಸಿದ್ದಾರೆ.26 ಗಂಟೆಗಳ ಇಡಿ ದಾಳಿ ಬಳಿಕ ರೋಷನ್ ಬೇಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಮಗೆ 500, 1000 ಎಕರೆ ಜಾಗಗಳಿಲ್ಲ. ನನ್ನನ್ನು ಅಧಿಕಾರಿಗಳು ಏನು ಪ್ರಶ್ನೆ ಕೇಳಿದ್ದರೊ ಆ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟಿದ್ದೇನೆ. ತನಿಖೆಯೂ 2-3 ಗಂಟೆಯಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ ಕೇಳಿದ್ದೇ ಕೇಳಿಕೊಂಡು ಏಕೆ ತಡಮಾಡಿದ್ದಾರೆ ಎಂದು ನನಗೂ ಗೊತ್ತಿಲ್ಲ. ಆದರೆ ಅವರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಿದ್ದೇನೆ ಎಂದು ಸ್ವಷ್ಟನೆ ನೀಡಿದ್ದಾರೆ.ಮನಿ ಲಾಂಡ್ರಿಂಗ್ ಇದೆಯ ಎಂದು ಕೇಳಿದ್ದರು ಆದರೆ ನಾನು ಪ್ರಾಪರ್ಟಿ ಡಾಕ್ಯುಮೆಂಟ್ಸ್ ಕೊಟ್ಟಿದೇವೆ. ಲೋಕಾಯುಕ್ತ, ಐಟಿಗೆ ಹಾಗೂ 2004 ರಿಂದ ಇವರೆಗೆ ಎಲೆಕ್ಷನ್ ಅಫಿಡೆವೆಟ್ಸ್ ಫೈಲ್ ಮಾಡಿರುವುದನ್ನು ಸಹ ವಿಚಾರಿಸಿಕೊಂಡು ಹೋಗಿದ್ದಾರೆ. ಅವರಿಗೆ ಎಲ್ಲ ಮಾಹಿತಿಗಳನ್ನು ಕೊಟ್ಟು ವಿಚಾರಣೆಗೆ ಸಹಕಾರಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಭಿನಂದಿಸಲು ಹಾರ ತುರಾಯಿ ತರಬೇಡಿ, ಪುಸ್ತಕ ತನ್ನಿ: ಸುನೀಲ್ ಕುಮಾರ್Sign in to your account
Username or Email Address


Password

 Remember Me


