ಬೆಂಗಳೂರು: ರಾಜ್ಯದಲ್ಲಿ ಇಂದು 1,785 ಪ್ರಕರಣಗಳು ಪತ್ತೆಯಾಗಿದ್ದು, 25 ಜನರನ್ನು ಮಹಾಮಾರಿ ಬಲಿ ಪಡೆದಿದೆ. 1,651 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಸದ್ಯ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಅಷ್ಟೇನು ಏರಿಕೆ ಕಾಣುತ್ತಿಲ್ಲ. ಆದರೆ ಮಹಾರಾಷ್ಟ್ರ, ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಗಡಿ ಜಿಲ್ಲೆಗಳಲ್ಲಿ ಆತಂಕ ಎದುರಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.1.10ರಷ್ಟಿದೆ. ಸಾವಿನ ಪ್ರಮಾಣ ಶೇ.1.40ರಷ್ಟಿದೆ. ರಾಜ್ಯದಲ್ಲಿ 24,414 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ ಒಟ್ಟು 29,13,512ರಷ್ಟು ಕೊರೊನಾ ಕೇಸ್ ಪತ್ತೆಯಾಗಿವೆ. ರಾಜ್ಯದಲ್ಲಿ ಇಂದು 1,61,662 ಕೊರೊನಾ ಟೆಸ್ಟ್ ಮಾಡಲಾಗಿದೆ.ಬೆಂಗಳೂರಿನಲ್ಲಿ ಇಂದು 414 ಕೇಸ್ ದಾಖಲಾಗಿದ್ದು, ಐವರು ಕೊರೊನಾಗೆ ಬಲಿಯಾಗಿದ್ದಾರೆ. 554 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 8,560 ಸಕ್ರಿಯ ಪ್ರಕರಣಗಳಿವೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 6, ಬಳ್ಳಾರಿ 6, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 40, ಬೆಂಗಳೂರು ನಗರ 414, ಬೀದರ್ 1, ಚಾಮರಾಜನಗರ 44, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 97, ಚಿತ್ರದುರ್ಗ 26, ದಕ್ಷಿಣ ಕನ್ನಡ 337, ದಾವಣಗೆರೆ 10, ಧಾರವಾಡ 10, ಗದಗ 5, ಹಾಸನ 125, ಹಾವೇರಿ 3, ಕಲಬುರಗಿ 9, ಕೊಡಗು 100, ಕೋಲಾರ 57, ಕೊಪ್ಪಳ 7, ಮಂಡ್ಯ 46, ಮೈಸೂರು 105, ರಾಯಚೂರು 7, ರಾಮನಗರ 8, ಶಿವಮೊಗ್ಗ 35, ತುಮಕೂರು 49, ಉಡುಪಿ 134, ಉತ್ತರ ಕನ್ನಡ 60, ವಿಜಯಪುರ 5 ಮತ್ತು ಯಾದಗಿರಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.Sign in to your account
Username or Email Address


Password

 Remember Me


