ಬೆಂಗಳೂರು: ಸ್ಯಾಂಡಲ್‍ವುಡ್ ಬಹುಬೇಡಿಕೆಯ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಈಗಾಗಲೇ ಹಲವು ಹೀರೋಗಳ ಜೊತೆ ನಟಿಸುವ ಮೂಲಕ ಮನೆ ಮಾತಾಗಿರುವ ಆಶಿಕಾ ಕೈಯಲ್ಲಿ ಸದ್ಯ ಅನೇಕ ಆಫರ್ ಗಳಿವೆ.ಆಗಸ್ಟ್ 5ರಂದು ನಟಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಆಶಿಕಾ ನಟಿಸುತ್ತಿರುವ ‘ಮದಗಜ’ ಸಿನಿಮಾದಿಂದ ಅವರ ಒಂದು ಹೊಸ ಪೋಸ್ಟರ್ ರಿಲೀಸ್ ಆಗಿದ್ದು ಅಚ್ಚರಿ ಮೂಡಿಸುವಂತಿದೆ. ಅದರಲ್ಲಿ ಆಶಿಕಾ ರಂಗನಾಥ್ ಸಿಗರೇಟ್ ಸೇದುತ್ತಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇಷ್ಟು ದಿನ ಆಶಿಕಾ ರಂಗನಾಥ್ ಗ್ಲಾಮರಸ್ ಆಗಿದ್ದರೂ ಮುಗ್ಧ ಹುಡುಗಿಯ ಲುಕ್‍ನಲ್ಲಿ ಮಿಂಚುತ್ತಿದ್ದರು. ಆದರೆ ಇದೀಗ ಅವರು ಏಕಾಏಕಿ ಸಿಗರೇಟ್ ಕೈಯಲ್ಲಿ ಹಿಡಿದಿಕೊಂಡು ಪೋಸ್ ನೀಡುವ ಮೂಲಕ ಅಭಿಮಾನಿಗಳು ಹುಬ್ಬೇರುಸವಂತೆ ಮಾಡಿದ್ದಾರೆ. ಈ ಮೊದಲು ಮದಗಜ ತಂಡ ಬಿಡುಗಡೆ ಮಾಡಿದ್ದ ಪೋಸ್ಟರ್‍ನಲ್ಲಿ ಅವರು ಹಳ್ಳಿ ಹುಡುಗಿಯ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.‘ಮದಗಜ’ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ರೋರಿಂಗ್ ಸ್ಟಾರ್’ ಶ್ರೀಮುರಳಿ ನಟನೆಯ ಈ ಸಿನಿಮಾ ಮೇಲೆ ಸಿನಿಪ್ರಿಯರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಟೀಸರ್‍ಗಳ ಮೂಲಕ ಈ ಚಿತ್ರ ಹೈಪ್ ಸೃಷ್ಟಿ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಆಶಿಕಾ ಅವರ ಈ ಹೊಸ ಪೋಸ್ಟರ್ ಅನಾವರಣಗೊಂಡಿದೆ.  A post shared by Ashika Ranganath (@ashika_rangnath)Sign in to your account
Username or Email Address


Password

 Remember Me


