ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಿಗ್‍ಬಾಸ್ ಮನೆಯಿಂದ ಕಳೆದ ವಾರವಷ್ಟೇ ಎಲಿಮಿನೇಟ್ ಆದ ಶುಭಾ ಪೂಂಜಾ ತಮ್ಮ ಭಾವಿ ಪತಿ ಜೊತೆ ಟ್ರಿಪ್‍ಗೆ ಹಾರಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರಬಂದ ಶುಭಾ ಪೂಂಜಾ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಜಾಲಿ ಮೂಡ್‍ನಲ್ಲಿ ತಮ್ಮ ಭಾವಿ ಪತಿ ಜೊತೆ ಪ್ರವಾಸ ಬೆಳೆಸಿದ್ದು, ಸುಮಂತ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಫೋಟೋದಲ್ಲಿ ಬೀಚ್ ಬಳಿ ಶುಭಾ ಹಾಗೂ ಸುಮಂತ್ ಕಾಣಿಸಿಕೊಂಡಿದ್ದು ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಿಮ್ಮೆಲ್ಲರ ಬರ್ತ್‍ಡೇ ವಿಶಸ್‍ಗೆ ತುಂಬಾನೇ ಥ್ಯಾಂಕ್ಯು. ನಿಮ್ಮೆಲ್ಲರ ಶುಭಾಶಯಗಳನ್ನು ಓದುತ್ತಿದ್ದೇನೆ. ಎಲ್ಲರಿಗೂ ತುಂಬಾ ಧನ್ಯವಾದ. ಅದರಲ್ಲಿಯೂ ಮುದ್ದಾದ ವೀಡಿಯೋಗಳನ್ನು ಮಾಡಿದ ನನ್ನ ಎಲ್ಲಾ ಮುದ್ದಾದ ಅಭಿಮಾನಿಗಳಿಗೆ ವಿಶೇಷವಾದ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.  A post shared by shubha Poonja . (@shubhapoonja)ಕಳೆದ ವಾರವಷ್ಟೇ ಬಿಗ್‍ಬಾಸ್ ಮನೆಯಿಂದ ಹೊರಬಂದ ಶುಭಾ ಪೂಜಾಗೆ ವಾಟ್ ನೆಕ್ಷ್ಟ್ ಎಂದು ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು. ಈ ವೇಳೆ ಶುಭಾ ಈ ವಾರ ನನ್ನ ಬರ್ತ್‍ಡೇ ಇದೆ. ಹಾಗಾಗಿ ನನ್ನ ಫ್ರೆಂಡ್ಸ್ ಜೊತೆ ಔಟ್ ಆಫ್ ಸ್ಟೇಷನ್‍ಗೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿದ್ದೇನೆ ಎಂದಿದ್ದರು. ಆಗ ಸುದೀಪ್ ಬರ್ತ್‍ಡೇಯನ್ನು ಸೆಲೆಬ್ರೆಟ್ ಮಾಡಿ ಆದರೆ ಏನಾದರೂ ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ ಫಿನಾಲೆಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.ನಂತರ 6 ತಿಂಗಳು ಫಿಯಾನ್ಸೆ ನನಗೆ ಸಪೋರ್ಟ್ ಮಾಡಿ ಬಿಗ್‍ಬಾಸ್ ಮನೆಗೆ ಕಳುಹಿಸಿ 6 ತಿಂಗಳ ಕಾಲ ಕಾದಿದ್ದಾರೆ. ಅವರೇ ನನಗೆ ಬಿಗ್‍ಬಾಸ್ ಮನೆಗೆ ಹೋಗು ಎಂದಿದ್ದರು. ನನಗೋಸ್ಕರ ಫಸ್ಟ್ ಇನ್ನಿಂಗ್ಸ್ ಕಾದು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಕಾದಿದ್ದಾರೆ. ಸದ್ಯ ಇದೀಗ ಮದುವೆಯಾಗುವುದಾಗಿ ಬಹಿರಂಗ ಪಡೆಸಿದ್ದರು. ಇದನ್ನೂ ಓದಿ:ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು  A post shared by shubha Poonja . (@shubhapoonja)






 Advertisement 




Sign in to your account
Username or Email Address


Password

 Remember Me


