ಬೆಂಗಳೂರು: ನಟಿಯರಾದ ಜೆನಿಲಿಯಾ ಡಿಸೋಜಾ ಮತ್ತು ಆಶಿಕಾ ರಂಗನಾಥ್ ಹುಟ್ಟುಹಬ್ಬಕ್ಕೆ ಚಂದನವನದ ಪೈಲ್ವಾನ್ ಸುದೀಪ್ ಶುಭಾಶಯ ತಿಳಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಅವರಿಗೆ ಶುಭ ಹಾರೈಸಿದ್ದಾರೆ. ಹ್ಯಾಪಿ ಬರ್ತ್ ಡೇ ಜನಿಲಿಯಾ ಡಿಸೋಜಾ, ಸ್ಮೈಲ್, ಸ್ಮೈಲ್, ಸ್ಮೈಲ್ ಆ್ಯಂಡ್ ಹ್ಯಾವ್ ಎ ಗ್ರೇಟ್ ಡೇ ಆ್ಯಂಡ್ ಇಯರ್, ಹ್ಯಾಪಿ ರಿಟರ್ನ್ಸ್. ವೆಗಾನ್ ಪಾರ್ಟಿ ಸೂನ್ ಎಂದು ಬರೆದುಕೊಂಡಿದ್ದಾರೆ.Yaaaappyyyy burrrrthdayyyy @geneliad …
Smile smile smile and have a greatttttr day n year.
Happy returns.
Vegan party soooonnn ???????????? pic.twitter.com/oM5EO2ZR6v— Kichcha Sudeepa (@KicchaSudeep) August 5, 2021ಅಂದಹಾಗೆ ನಟಿ ಜೆನಿಲಿಯಾ ಡಿಸೋಜಾ ಪತಿ ರಿತೇಶ್ ದೇಶ್‍ಮುಖ್ ಹಾಗೂ ಕಿಚ್ಚ ಸುದೀಪ್ ಸಿಸಿಎಲ್‍ನಿಂದ ಪರಿಚಯ. ಹೀಗೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಬಳಿಕ ಕುಟುಂಬ ಸ್ನೇಹಿತರಾಗಿದ್ದಾರೆ. ಹೀಗಾಗಿ ಜೆನಿಲಿಯಾಗೆ ಕಿಚ್ಚ ಸುದೀಪ್ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಸ್ನೇಹವನ್ನು ನೆನೆದು ಗಮನ ಸೆಳೆದಿದ್ದಾರೆ.ಜೆನಿಲಿಯಾ ಡಿಸೋಜಾ ಅವರು ಕನ್ನಡದಲ್ಲಿ ಸತ್ಯ ಇನ್ ಲವ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ಜೆನಿಲಿಯಾ, ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ.ಸ್ಯಾಂಡಲ್‍ವುಡ್ ಪಟಾಕಿ ಪೋರಿ ಆಶಿಕಾ ರಂಗನಾಥ್ ಅವರಿಗೆ ಸಹ ಅವರದ್ದೇ ಶೈಲಿಯಲ್ಲಿ ಶುಭಾಶಯ ತಿಳಿಸಿದ್ದಾರೆ. ಪಟಾಕಿ ಪೋರಿಯೋ ಹಾಡಿನ ಪಟಾಕಿ ಆಶಿಕಾ ರಂಗನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಹ್ಯಾವ್ ಎ ಗ್ರೇಟ್ ಒನ್ ಎಂದು ಶುಭ ಹಾರೈಸಿದ್ದಾರೆ. ಪಟಾಕಿ ಪೋರಿಯೋ ಹಾಡು ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾದ್ದಾಗಿದ್ದು, ಹಾಡು ಭಾರೀ ಸದ್ದು ಮಾಡುತ್ತಿದೆ. ಹೀಗಾಗಿ ಇದೇ ಶೈಲಿಯಲ್ಲಿ ಸುದೀಪ್ ವಿಶ್ ಮಾಡಿದ್ದಾರೆ.Wishing the Pattaki @AshikaRanganath of the #PattakiPoriyo song a very happy birthday.
Have agreat one ???????? pic.twitter.com/OX5UTTxT70— Kichcha Sudeepa (@KicchaSudeep) August 5, 2021ಆಶಿಕಾ ರಂಗನಾಥ್ ಸದ್ಯ ಶ್ರೀಮುರುಳಿ ಅಭಿನಯದ ಮದಗಜ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದರಲ್ಲಿ ಜಗಪತಿ ಬಾಬು ಹಾಗೂ ಚಿಕ್ಕಣ್ಣ ಸೇರಿದಂತೆ ಹಲವು ನಟರು ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಕೋಟಿಗೊಬ್ಬ 3 ಸಿನಿಮಾದ ಡಬ್ಬಿಂಗ್ ಕೆಲಸ ಮುಗಿದಿದ್ದು, ಅಂತಿಮ ಹಂತದ ಕೆಲಸಗಳಷ್ಟೇ ಬಾಕಿ ಉಳಿದಿವೆ. ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಬಿಡುಗಡೆ ತಡವಾಗಿದೆ.Sign in to your account
Username or Email Address


Password

 Remember Me


