ತುಮಕೂರು: ಮಾಜಿ ಸಚಿವ ಸುರೇಶ್ ಕುಮಾರ್ ಅವರಷ್ಟು ಶಕ್ತಿ, ಸಾಮರ್ಥ್ಯ ನನಗಿಲ್ಲ. ಅವರ ಅನುಭವ ಹಾಗೂ ಹೋರಾಟದ ಮುಂದೆ ನಾನು ಗೌಣ ಎಂದು ನೂತನ ಸಚಿವ ಬಿ.ಸಿ ನಾಗೇಶ್ ಹೇಳಿದರು.ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಕೋಟಾ ಬಿಜೆಪಿಯಲ್ಲಿ ಇಲ್ಲ. ಜಾತಿ ಕೋಟಾದ ಅಡಿಯಲ್ಲಿ ನನಗೆ ಸಚಿವ ಸ್ಥಾನ ಕೊಟ್ಟಿಲ್ಲ. ಜಾತಿ ಲೆಕ್ಕಾಚಾರ ಕೇವಲ ಮಾಧ್ಯಮಗಳ ಸೃಷ್ಟಿ. ಕಾಂಗ್ರೆಸ್ ನವರು ಜಾತಿ ಆಧಾರಿತ ರಾಜಕಾರಣ ಮಾಡ್ತಾರೆ ಎಂದರು. ಇದನ್ನೂ ಓದಿ: ಪ್ರವಾಹ, ಕೋವಿಡ್ ನಿರ್ವಹಣೆಗಾಗಿ ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿಪರಿಶ್ರಮದಿಂದ ಬೆಳೆದ ಕಾರ್ಯಕರ್ತರಿಗೆ ಪಕ್ಷ ಹೊಸ ಜವಾಬ್ದಾರಿ ಕೊಟ್ಟಿದೆ. ಹಗಲು ರಾತ್ರಿ ಕೆಲಸ ಮಾಡಿ ವರಿಷ್ಠರ ನಿರೀಕ್ಷೆಯನ್ನ ಪೂರ್ಣ ಮಾಡುತ್ತೇನೆ. ನಾನು ಮಂತ್ರಿಗಿರಿಯನ್ನ ನಿರೀಕ್ಷಿಸಿರಲಿಲ್ಲ. ಆದರೂ ಪಕ್ಷ ಜವಾಬ್ದಾರಿ ನೀಡಿದೆ. ಯಾವ ಖಾತೆ ಕೊಟ್ರೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಬಿ.ಸಿ ನಾಗೇಶ್ ತಿಳಿಸಿದರು.


 Advertisement 







 Advertisement 




Sign in to your account
Username or Email Address


Password

 Remember Me


