ಆನೇಕಲ್: ಎದೆಹಾಲು ನೀಡುವುದರ ಅವಶ್ಯಕತೆಯ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್ ನಟಿ ಮಯೂರಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಯಾಮರಾ ಮುಂದೆ ಹಲವು ಪಾತ್ರ ನಿಭಾಯಿಸಿದ್ದ ನನಗೆ, ನಿಜ ಜೀವನದಲ್ಲಿ ತಾಯಿಯಾದಾಗ ಆ ಪಾತ್ರ ಅದೆಷ್ಟು ಜವಾಬ್ದಾರಿಯುತ ಎಂಬುದು ಅರ್ಥವಾಯಿತು. ಆ ಬದಲಾವಣೆಯನ್ನ ಅತೀವ ಸಂಭ್ರಮದಿಂದ ಸ್ವೀಕರಿಸಿದ್ದೇನೆ. ಮಗುವನ್ನ ನೋಡಿಕೊಳ್ಳುವುದು ನಿಜಕ್ಕೂ ಬಹು ದೊಡ್ಡ ಹೊಣೆ ಎಂಬುದು ನನಗೆ ಮನವರಿಕೆಯಾಗಿದೆ. ನಾನು ಈ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದರೆ ಇದರಲ್ಲಿ ನನ್ನ ಪತಿ ಮತ್ತು ಕುಟುಂಬದವರ ಬೆಂಬಲದಿಂದಲೇ ಎಂದು ಹೇಳಿದರು. ಇದನ್ನೂ ಓದಿ: ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯಗತ್ಯ. ನಾನು ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಎದೆಹಾಲಿನ ಮಹತ್ವದ ಕುರಿತು ರೈನ್ ಬೋ ಕೈಗೊಂಡಿರುವ ಈ ಜಾಗೃತಿ ಕಾರ್ಯಕ್ರಮ ತುಂಬಾ ಸಮಯೋಚಿತವಾಗಿದೆ. ಆಸ್ಪತ್ರೆಯ ಈ ಕಾಳಜಿಯ ಅಭಿಯಾನದಲ್ಲಿ ನಾನು ಜೊತೆಯಾಗಿರುವುದು ಸಂತಸ ತಂದಿದೆ ಎಂದರು.Sign in to your account
Username or Email Address


Password

 Remember Me


