ಬಳ್ಳಾರಿ: ಪಕ್ಷ ನನಗೆ ತಾಯಿ ಸಮಾನ ಪಕ್ಷ ಹಾಗೂ ವರಿಷ್ಠರು ತೆಗೆದು ಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.ಇಂದು ರಾಜ್ಯದ ನೂತನ ಸಚಿವ ಸಂಪುಟ ಪುನರ್ ರಚನೆಯಾಗಿದೆ. ಆದರೆ ಗಣಿ ನಾಡು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಕಳೆದ ಒಂದು ವಾರದಿಂದ ಶಾಸಕ ಸೋಮಶೇಖರ್ ರೆಡ್ಡಿ ದೆಹಲಿಯಲ್ಲಿ ಬೀಡು ಬಿಟ್ಟಿ ಸಚಿವ ಸ್ಥಾನಕ್ಕೆ ಭಾರಿ ಕಸರತ್ತು ನಡೆಸಿದ್ದರು. ಆದರೂ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲಾ, ಹೀಗಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ.ಪಕ್ಷ ನನಗೆ ತಾಯಿ ಸಮಾನ ಪಕ್ಷ ಹಾಗೂ ವರಿಷ್ಠರು ತೆಗೆದು ಕೊಳ್ಳುವ ನಿರ್ಧಾರಕ್ಕೆ ಬದ್ದವಾಗಿರುತ್ತೇನೆ. ಜನರ ಸೇವೆಯೇ ನನ್ನ ಕಾಯಕ ನನ್ನ ಇಡೀ ಜೀವನ ಬಳ್ಳಾರಿ ಜನರ ಸೇವೆಗೆ ಮುಡಿಪಾಗಿಡುತ್ತೆನೆ. ಪಕ್ಷದ ಕಾರ್ಯಕರ್ತರು ಮುಖಂಡರು ನಿರಾಶರಾಗದಿರಿ ಪಕ್ಷ ಸಂಘಟನೆಗೆ ಮುಂದಾಗಿರಿ ಎಂದು ಬರೆದುಕೊಂಡಿದ್ದಾರೆ.ಒಂದು ವಾರದಿಂದ ದೆಹಲಿಯಲ್ಲಿ ಬೀಡು ಬಿಟ್ಟು, ಸಚಿವ ಸ್ಥಾನಕ್ಕೆ ಭಾರಿ ಲಾಬಿ ಮಾಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ರೆಡ್ಡಿ ಲಾಬಿಗೆ ಮಣಿದಿಲ್ಲಾ, ಹೀಗಾಗಿ ನಾಳೆ ರೆಡ್ಡಿ ಬಳ್ಳಾರಿಗೆ ಮರಳಲಿದ್ದಾರೆ. ಕಳೆದ ಎರಡು ದಿನಗಳು ಹಿಂದೆ ಬಳ್ಳಾರಿ ನಗರ ಪಾಲಿಕೆಯ 9 ಜನ ಕಾರ್ಪೊರೇಟರ್ ಗಳು ರೆಡ್ಡಿ ಪರವಾಗಿ ಬ್ಯಾಟ್ ಬೀಸಿ ಸೋಮಶೇಖರ್ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹಾಕಿದ್ದರು.






 Advertisement 




Sign in to your account
Username or Email Address


Password

 Remember Me


