ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಪಲ್ಟಿಯಾಗಿ ಏಳು ಜನ ಮೀನುಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.ಮುರುಡೇಶ್ವರದಿಂದ ಜಲಗಂಗಾ ಎಂಬ ಹೆಸರಿನ ದೋಣಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಅಲೆಗಳ ಅಬ್ಬರಕ್ಕೆ ಬೋಟ್ ತಳಭಾಗಕ್ಕೆ ಅಲೆಯಿಂದ ಹಾನಿಯಾಗಿ ಪಲ್ಟಿಯಾಗಿದೆ. ತಕ್ಷಣ ಸ್ಥಳೀಯ ಮೀನುಗಾರರು ಇವರನ್ನು ರಕ್ಷಿಸಿದ್ದಾರೆ.ಜನಾರ್ಧನ್ ಪುರ್ಸು, ಹರಿಕಾಂತ ಗದ್ದೆಮನೆ ಅವರಿಗೆ ಸೇರಿದ ಬೋಟ್ ಇದಾಗಿದ್ದು, ಬೋಟ್ ಪಲ್ಟಿಯಾಗಿ ಬಲೆಗಳು ಕೊಚ್ಚಿಹೋಗಿವೆ. ಬೋಟ್ ಮತ್ತು ಇಂಜಿನ್ ಹಾಳಾಗಿದ್ದು 1,50,000 ರೂ. ಹಾನಿಯಾಗಿದೆ.Sign in to your account
Username or Email Address


Password

 Remember Me


