ಬೆಂಗಳೂರು: ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಪ್ರವಾಹ ಹಾಗೂ ಕೊರೊನಾ ಪರಿಸ್ಥಿತಿ ನಿರ್ವಹಣೆಗಾಗಿ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ನೂತನ 29 ಸಚಿವರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ.ಕೋವಿಡ್ ಮತ್ತು ನೆರೆ ಹಾವಳಿ ನಿರ್ವಹಣೆ ಸುಲಭವಾಗಲು ಇಂದು ಸಂಜೆಯೇ ಜಿಲ್ಲೆಗಳಿಗೆ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಬೆಂಗಳೂರು ನಗರದ ಹೊಣೆಯನ್ನು ಅಶೋಕ್‍ಗೆ ನೀಡಲಾಗಿದೆ. ಗೋವಿಂದ ಕಾರಜೋಳಗೆ ಬೆಳಗಾವಿ ಉಸ್ತುವಾರಿ ನೀಡಲಾಗಿದೆ. ವಿ.ಸೋಮಣ್ಣಗೆ ರಾಯಚೂರು, ಅರಗ ಜ್ಞಾನೇಂದ್ರಗೆ ಚಿಕ್ಕಮಗಳೂರು, ಅಶ್ವಥ್ ನಾರಾಯಣ್‍ಗೆ ರಾಮನಗರದ ಹೊಣೆಯನ್ನು ಸಿಎಂ ನೀಡಿದ್ದಾರೆ.ಮುನಿರತ್ನಗೆ ಕೋಲಾರ, ಬಿಸಿ ನಾಗೇಶ್‍ಗೆ ಯಾದಗಿರಿ, ಸುನೀಲ್‍ಕುಮಾರ್‍ಗೆ ಉಡುಪಿ, ಹಾಲಪ್ಪ ಆಚಾರ್‍ಗೆ ಕೊಪ್ಪಳ, ಶಂಕರ್ ಪಾಟೀಲ್ ಮುನೇನಕೊಪ್ಪಗೆ ಧಾರವಾಡದ ಉಸ್ತುವಾರಿ ನೀಡಲಾಗಿದೆ. ನಾಳೆಯಿಂದಲೇ ಪ್ರವಾಹಪೀಡಿತ ಭಾಗಗಳಿಗೆ ಹೋಗಲು ಹೊಸ ಸಚಿವರಿಗೆ ಸಿಎಂ ಸೂಚಿಸಿದ್ದಾರೆ.ಯಾವ ಸಚಿವರಿಗೆ ಯಾವ ಜಿಲ್ಲೆ?
ಗೋವಿಂದಕಾರಜೋಳ -ಬೆಳಗಾವಿ, ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ, ಆರ್.ಅಶೋಕ್-ಬೆಂಗಳೂರು ನಗರ, ಶ್ರೀರಾಮುಲು-ಚಿತ್ರದುರ್ಗ, ವಿ.ಸೋಮಣ್ಣ-ರಾಯಚೂರು, ಉಮೇಶ್ ಕತ್ತಿ-ಬಾಗಲಕೋಟೆ, ಅಂಗಾರ- ದಕ್ಷಿಣ ಕನ್ನಡ, ಜೆ.ಸಿ.ಮಾಧುಸ್ವಾಮಿ-ತುಮಕೂರು, ಅರಗ ಜ್ಞಾನೇಂದ್ರ-ಚಿಕ್ಕಮಗಳೂರು, ಅಶ್ವಥನಾರಾಯಣ್-ರಾಮನಗರ, ಸಿ.ಸಿ.ಪಾಟೀಲ್-ಗದಗ, ಆನಂದ್ ಸಿಂಗ್-ಬಳ್ಳಾರಿ ಮತ್ತು ವಿಜಯನಗರ, ಪ್ರಭು ಬಿ ಚವ್ಹಾಣ್-ಬೀದರ್, ಕೋಟ ಶ್ರೀನಿವಾಸ್ ಪೂಜಾರಿ-ಕೊಡಗು, ಮುರುಗೇಶ್ ನಿರಾಣಿಯವರಿಗೆ ಕಲಬುರಗಿ ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ.ಶಿವರಾಮ್ ಹೆಬ್ಬಾರ್-ಉತ್ತರ ಕನ್ನಡ, ಎಸ್.ಟಿ.ಸೋಮಶೇಖರ್-ಮೈಸೂರು ಮತ್ತು ಚಾಮರಾಜನಗರ, ಬಿ.ಸಿ.ಪಾಟೀಲ್-ಹಾವೇರಿ, ಭೈರತಿ ಬಸವರಾಜ್-ದಾವಣಗೆರೆ, ಸುಧಾಕರ್-ಚಿಕ್ಕಬಳ್ಳಾಪುರ, ಗೋಪಾಲಯ್ಯ-ಹಾಸನ, ಶಶಿಕಲಾ ಜೊಲ್ಲೆ-ವಿಜಯಪುರ, ಎಂಟಿಬಿ ನಾಗರಾಜ್-ಬೆಂಗಳೂರು ಗ್ರಾಮಾಂತರ, ನಾರಾಯಣಗೌಡ-ಮಂಡ್ಯ, ಬಿ.ಸಿ.ನಾಗೇಶ್-ಯಾದಗಿರಿ, ಸುನೀಲ್‍ಕುಮಾರ್-ಉಡುಪಿ, ಹಾಲಪ್ಪ ಆಚಾರ್-ಕೊಪ್ಪಳ, ಶಂಕರ್.ಬಿ.ಪಾಟೀಲ್ ಮುನೇನಕೊಪ್ಪ-ಧಾರವಾಡ, ಮುನಿರತ್ನ ಅವರಿಗೆ ಕೋಲಾರ ಉಸ್ತುವಾರಿ ವಹಿಸಲಾಗಿದೆ.Sign in to your account
Username or Email Address


Password

 Remember Me


