ಕಲಬುರಗಿ: ಜಮೀನಿನ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಬುಧವಾರ ನಡೆದಿದೆ.ಕ್ಷುಲಕ ಕಾರಣಕ್ಕೆ ಜಮೀನಿನ ವಿಚಾರವಾಗಿ ನಡೆದ ವಾಗ್ವಾದಲ್ಲಿ ಕಡಗಂಚಿ ಗ್ರಾಮದ ಮಹಿಳೆ ನಿರ್ಮಲ ಸಾತಲಿಂಗಪ್ಪ (38) ಮೇಲೆ ಗುಂಡಿನ ದಾಳಿ ನಡೆದಿದೆ. ಅದೇ ಗ್ರಾಮದ ನಾಗರಾಜ ವಾಣಿ ಗುಂಡು ಹಾರಿಸಿದ ಆರೋಪಿಯಾಗಿದ್ದು, ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಎರಡನೇ ಗುಂಡು ನೇರವಾಗಿ ನಿರ್ಮಲಾ ಭುಜಕ್ಕೆ ತಾಗಿ, ಗಾಯಗೊಂಡಿದ್ದಾರೆ.ಸದ್ಯ ಆರೋಪಿ ನಾಗರಾಜನನ್ನು ಬಂಧಿಸಲಾಗಿದ್ದು, ಈ ಸಂಬಂಧ ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.Sign in to your account
Username or Email Address


Password

 Remember Me


