ಮಂಡ್ಯ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್‍ಗಳು ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರವನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳು ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಹಾಗೂ ಜಯಪುರ ಗ್ರಾಮದ ಯತೀನ್ (25), ವಿಜಯ್ ಕುಮಾರ್(30) , ಕಾರ್ತಿಕ್ (24) ಹಾಗೂ ಶಿವಕುಮಾರ್ (29) ಆಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ್ದ 18 ಹೀರೋ ಸ್ಪ್ಲೇಂಡರ್, 6 ಫ್ಯಾಷನ್ ಪ್ರೋ, 1 ಪಲ್ಸರ್ ಹಾಗೂ 1 ಪ್ಲಾಟಿನಂ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.ಇಲ್ಲದೇ ಆರೋಪಿಗಳು ಮನೆಗಳ್ಳತನದ ವೇಳೆ ಕದ್ದಿದ್ದ 18 ಗ್ರಾಂ ಚಿನ್ನದ ಚೈನ್, 2 ಉಂಗುರ, 1ಬ್ರಾಸ್‍ಲೈಟ್, 12 ಗ್ರಾಂ ಚಿನ್ನದ ಒಡವೆಗಳು ಸೇರಿದಂತೆ ಒಟ್ಟು 42 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಬಂಧಿತ ನಾಲ್ವರು ಆರೋಪಿಗಳನ್ನು ಡಿವೈಎಸ್‍ಪಿ ಧನಂಜಯ ನೇತೃತ್ವದ ತಂಡದ ಕಾರ್ಯಾಚರಣೆಯಲ್ಲಿ ಹಿಡಿಯಲಾಗಿದೆ. ಈ ತಂಡದಲ್ಲಿ ಸಿಪಿಐ ಕೆ.ಸಂತೋಷ್, ಪಶ್ಚಿಮ ಠಾಣೆ ಪಿಎಸ್‍ಐ ಶರತ್‍ಕುಮಾರ್, ಎಸ್.ಪ್ರಭಾ ಅವರು ಇದ್ದರು. ಕಾರ್ಯಾಚರಣೆ ಮಾಡಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


