ಬೆಂಗಳೂರು: ಪೆನ್‌ಡ್ರೈವ್ ಪ್ರಕರಣದಲ್ಲಿ (Pendrive Case) ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ, ಗೃಹ ಸಚಿವರು ಹಗಲಿರುಳು ಶ್ರಮ ಪಡುತ್ತಿದ್ದಾರೆ. ಅಪರಾಧಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿದೆ. ಪೆನ್‌ಡ್ರೈವ್ ಕೇಸ್ ಎಸ್‌ಐಟಿ ತನಿಖೆ ಮಾಡುತ್ತಿದೆ. ಯಾರು ತಪ್ಪಿತಸ್ಥರೋ ಅವರಿಗೆ ಶಿಕ್ಷೆ ಆಗಲಿದೆ. ಮಾಜಿ ಸಿಎಂ ಹೆಚ್‌ಡಿಕೆ ಸೇರಿದಂತೆ ಪ್ರತಿಪಕ್ಷಗಳು ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳಪಾರದರ್ಶಕ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರ ಯಾರ ಕೈವಾಡ ಇದೆ ಎಲ್ಲಾ ಹೊರಗೆ ಬರುತ್ತದೆ. ಇದೊಂದು ಗಂಭೀರ ಪ್ರಕರಣ. ಕೇಂದ್ರ ಸರ್ಕಾರ ಸ್ವಯಂ ಪ್ರೇರಣೆಯಿಂದ ಡಿಪ್ಲೊಮೆಟಿಕ್ ಪಾಸ್‌ಪೋರ್ಟ್ ರದ್ದು ಮಾಡಬೇಕು. ಕೇಂದ್ರ ಸರ್ಕಾರ ಸರಿಯಾದ ಸಹಕಾರ ನೀಡಬೇಕು. ಬಿಜೆಪಿಗೆ (BJP) ಅಷ್ಟೆಲ್ಲಾ ಬದ್ಧತೆ ಇದ್ದರೆ ಪ್ರಜ್ವಲ್‌ನನ್ನು ಕರೆದುಕೊಂಡು ಬಂದು ಒಪ್ಪಿಸಬೇಕಿತ್ತು. ಜನರ ಗಮನ ಸೆಳೆಯಲು ಪ್ರತ್ಯಾರೋಪಗಳನ್ನು ಮಾಡುತ್ತಿದೆ. ಕಾನೂನು ತನ್ನ ಕೆಲಸ ಮಾಡಲು ಎಲ್ಲರೂ ಅವಕಾಶ ನೀಡಬೇಕು. ಮುಖ್ಯ ಆರೋಪಿ ಇದರಲ್ಲಿ ಯಾರು? ಅವರಿಗೆ ಶಿಕ್ಷೆ ಆಗಬೇಕೋ ಬೇಡವೋ? ಯಾಕೆ ಬಿಜೆಪಿ-ಜೆಡಿಎಸ್‌ನವರು ಶಂಕೆ ಮಾಡುತ್ತಿದ್ದಾರೆ? ದೌರ್ಜನ್ಯ ಮಾಡಿದ್ದು, ಅತ್ಯಾಚಾರ ಮಾಡಿದ್ದು ಯಾರು ಎಂಬುದು ಮುಖ್ಯ ಎಂದು ಹರಿಹಾಯ್ದರು. ಇದನ್ನೂ ಓದಿ: ಪ್ರಧಾನಿಗೆ ಎರಡು ಪತ್ರ ಬರೆದ್ರೂ ಉತ್ತರ ಇಲ್ಲ: ಸಿದ್ದರಾಮಯ್ಯಕಾಂಗ್ರೆಸ್ ನಾಯಕರಿಗೆ ಹೇಳಿ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದಾರೆ ಎಂಬ ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರ ಹೇಳಿಕೆಗೆ ತಲೆಬುಡ ಇದ್ಯಾ? ಯಾರಾದರೂ ಅದನ್ನು ನಂಬುತ್ತಾರಾ? ಪ್ರಕರಣ ದಾಖಲಿಸಿದ್ದು ಯಾರು, ನಮ್ಮ ಸರ್ಕಾರ. ಅವರಿಗೆ ಬೆಂಬಲ ಕೊಡುವ ಅವಶ್ಯಕತೆ ಏನಿದೆ? ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕೆಲಸ. ಸುಳ್ಳೇ ಅವರ ಮನೆ ದೇವರು. ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಹೊರಟ್ಟಿದ್ದಾರೆ. ಇವರೇ ಕಳುಹಿಸಿಬಿಟ್ಟು ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಇವರನ್ನು ಜನ ತಿರಸ್ಕರಿಸುತ್ತಾರೆ. ಮುಂದೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲೂ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದರು. ಇದನ್ನೂ ಓದಿ: ಪಿಎಂ ಹುದ್ದೆಗೆ ರಾಜ್ಯದಿಂದ ಯಾರೂ ಅಭ್ಯರ್ಥಿ ಇಲ್ಲ ಎಂದಿಲ್ಲ: ಸಿಎಂ ಸ್ಪಷ್ಟನೆಫೋನ್ ಟ್ಯಾಪಿಂಗ್ ಇವೆಲ್ಲ ಮಾಡೋರು ಬಿಜೆಪಿಯವರು. ಸಿ.ಡಿನೂ ಅವರೇ ಬಿಡುಗಡೆ ಮಾಡುತ್ತಾರೆ. ದೂರು ಅವರೇ ಕೊಡುತ್ತಾರೆ, ತನಿಖೆಯೂ ನಾವೇ ಮಾಡುತ್ತೇವೆ ಎನ್ನುತ್ತಾರೆ. ತೀರ್ಪು ಅವರೇ ಕೊಡುತ್ತಾರೆ. ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ. ಕಾನೂನಿನ ಬಗ್ಗೆ ಲೆಕ್ಕ ಇಲ್ಲ. ಅವರು ಹೇಳಿದ್ದೇ ಕಾನೂನು ಎನ್ನುತ್ತಾರೆ. ಅವರ ಹೇಳಿಕೆಯನ್ನು ನಂಬಬಹುದಾ? ಜನ ಅವರ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ – ಡಿಸಿ, ಸಿಇಒಗಳಿಗೆ ಹೈ ಅಲರ್ಟ್ ಎಂದ ಸಿಎಂ ಸಿದ್ದರಾಮಯ್ಯ






 Advertisement 




Sign in to your account
Username or Email Address


Password

 Remember Me


