ಮೈಸೂರು: ಕೇರಳದ (Kerala) ವಯನಾಡು ಸೇರಿದಂತೆ ಕಬಿನಿ ಜಲಾನಯನ (Kabini Reservoir) ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಮೈಸೂರು (Mysuru) ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ.ಕಬಿನಿ ಜಲಾಶಯದ ಇಂದಿನ ಒಳಹರಿವಿನ ಪ್ರಮಾಣ 4,356 ಕ್ಯೂಸೆಕ್ ಇದ್ದು, ಇದು ಈ ವರ್ಷದ ಹೆಚ್ಚಿನ ಒಳಹರಿವಾಗಿದೆ. ಜಲಾಶಯದಿಂದ ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರಿಗಾಗಿ 300 ಕ್ಯೂಸೆಕ್ ನೀರು ಹೊರ ಹರಿವು ಇದೆ. ಇದನ್ನೂ ಓದಿ: ಪಿಎಂ ಹುದ್ದೆಗೆ ರಾಜ್ಯದಿಂದ ಯಾರೂ ಅಭ್ಯರ್ಥಿ ಇಲ್ಲ ಎಂದಿಲ್ಲ: ಸಿಎಂ ಸ್ಪಷ್ಟನೆಸಮುದ್ರ ಮಟ್ಟದಿಂದ 2,284 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಇಂದು 2,258 ಅಡಿ ನೀರಿದೆ. ಇದನ್ನೂ ಓದಿ: ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ – ಡಿಸಿ, ಸಿಇಒಗಳಿಗೆ ಹೈ ಅಲರ್ಟ್ ಎಂದ ಸಿಎಂ ಸಿದ್ದರಾಮಯ್ಯಕಬಿನಿ ಜಲಾಶಯದ ಒಳಹರಿವು ಹೆಚ್ಚಳ
ಜಲಾಶಯ ಗರಿಷ್ಠ ಮಟ್ಟ: 2,284 ಕ್ಯೂಸೆಕ್
ಇಂದಿನ ಮಟ್ಟ: 2,258 ಕ್ಯೂಸೆಕ್
ಒಳ ಹರಿವು: 4,356 ಕ್ಯೂಸೆಕ್
ಹೊರ ಹರಿವು: 300 ಕ್ಯೂಸೆಕ್Sign in to your account
Username or Email Address


Password

 Remember Me


