– ಅಂತರ್ಜಾತಿ ಮದುವೆ ಮಾಡ್ಕೋಬೇಕು ಅಂತ ಆಸೆ ಪಟ್ಟಿದ್ದೆಮೈಸೂರು: ಮೊಟ್ಟ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಕಾಲೇಜು ದಿನದ ಹುಡುಗಿಯೊಂದಿಗಿನ ಸ್ನೇಹದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡುವ ವೇಳೆ ತಮ್ಮ ಒನ್‌ಸೈಡ್ ಲವ್‌ಸ್ಟೋರಿಯನ್ನು (One Side Love Story) ಸಿದ್ದರಾಮಯ್ಯ ರಿವೀಲ್ ಮಾಡಿದ್ದಾರೆ. ನಾನು ಅಂತರ್ಜಾತಿ ಮದುವೆ ಮಾಡಿಕೊಳ್ಳಬೇಕು ಎಂದು ಆಸೆಪಟ್ಟಿದ್ದೆ. ನಾನು ಲಾ ಓದುವಾಗ ಒಂದು ಹುಡುಗಿ ಜೊತೆ ಸ್ನೇಹ ಇತ್ತು. ಅದರ ಬಗ್ಗೆ ತಪ್ಪುತಪ್ಪಾಗಿ ಅಂದುಕೊಳ್ಳಬೇಡಿ. ಹುಡುಗಿ ಜೊತೆ ಸ್ನೇಹ ಇತ್ತು ಅಷ್ಟೇ ಎಂದು ತಮ್ಮ ಕಾಲೇಜು ದಿನದ (College Days) ನೆನಪು ಮೆಲುಕು ಹಾಕಿದರು. ಇದನ್ನೂ ಓದಿ: ಟಿಬಿ ಡ್ಯಾಂ ಹಿನ್ನೀರಿನ ಕಂದಕಕ್ಕೆ ಬಿತ್ತು ಬೈಕ್‌ – ಯವಕ ಸಾವು, ಓರ್ವ ಗಂಭೀರಆಕೆಯನ್ನು ನಾನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಮದುವೆ ಆಗಲು ಆಗಲಿಲ್ಲ. ಯಾಕೆಂದರೆ ಹುಡುಗಿನೂ ಒಪ್ಪಲಿಲ್ಲ, ಹುಡುಗಿಯ ಮನೆಯವರೂ ಒಪ್ಪಲಿಲ್ಲ. ಹಾಗಾಗಿ ನಾನು ಅಂತರ್ಜಾತಿ ಮದುವೆ ಆಗಲಿಕ್ಕೆ ಆಗಲಿಲ್ಲ. ಕೊನೆಗೆ ನಮ್ಮ ಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಳ್ಳಬೇಕಾಯಿತು ಎಂದು ಕಾಲೇಜು ದಿನದ ಹುಡುಗಿಯ ಸ್ನೇಹದ ವಿಚಾರ ಹೇಳಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು. ಇದನ್ನೂ ಓದಿ: ಮತಗಟ್ಟೆವಾರು ದತ್ತಾಂಶ ನೀಡಿದ್ರೆ ದುರ್ಬಳಕೆ ಆಗಬಹುದು: ಚುನಾವಣಾ ಆಯೋಗ ಆತಂಕ






 Advertisement 




Sign in to your account
Username or Email Address


Password

 Remember Me


